ಮಳೆಗಾಗಿ ಕಾದು ಕುಳಿತು ರೈತ ರೈತನ ಗೋಳು ಕೇಳುವರು ಯಾರು : ಆರ್ ಚನ್ನಬಸವ ಮಾನ್ವಿ

  • Shivaraj Bandigi
  • 14 Jan 2024 , 10:09 PM
  • Koppal
  • 301

ಗಂಗಾವತಿ : ರೈತ ಈ ದೇಶದ ಬೆನ್ನೆಲುಬು ಅನ್ನುತ್ತಾರೆ ಆದರೆ ರೈತನ ಗೋಳು ಯಾರು ಕೇಳುವವರಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. 

ಇದಕ್ಕೆ ಕಾರಣ ಇಲ್ಲಿದೆ.  ಕಳೆದ ಒಂದು ವಾರದಿಂದ ಚಂಡಮಾರುತ ಬೀಸುತ್ತಲೇ ಇದೆ ಇತ್ತ ಮೋಡ ಕವಿದ ವಾತಾವರಣವು ಯಾವುದೇ ಫಲಾಪೇಕ್ಷೆ ನೀಡುತ್ತಿಲ್ಲ. ಹೀಗಾಗಿ ರೈತಾಪಿ ವರ್ಗ ಕಂಗಾಲಾಗಿದ್ದು ಅನ್ನದಾತರ ದಿಗಿಲು ಬಡಿಸಿದೆ.

ಮುಂಗಾರು ಹಂಗಾಮಿಗೆ ರೈತರು ತಮ್ಮೆಲ್ಲಾ ಜಮೀನುಗಳನ್ನು ಸದ್ಯಹಸನುಗೊಳಿಸಿಟ್ಟುಕೊಂಡಿದ್ದಾರೆ. ಇನ್ನೇನು ಮಳೆ ಬಂದರೆ, ಬೀಜ ಭೂಮಿಗೆ ಹಾಕಿದರಾಯಿತು ಎಂದುಕೊಂಡು ಕುಳಿತಿರುವ ಕೃಷಿಕರಿಗೆ ಇದೀಗ ದಿಕ್ಕೇ ತೋಚದಂತಾಗಿದೆ.

ಕಳೆದ ಮೂರು ದಿನಗಳಿಂದ ರಾಜ್ಯದ ಬಹುತೇಕ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಲಕ್ಷಣಗಳು ಅಲ್ಪ ಸ್ವಲ್ಪ ಗೋಚರಿಸಿವೆಯಾದರೂ ಅನಿರೀಕ್ಷಿತ ಚಂಡಮಾರುತದ ಗಾಳಿಯು ಮಳೆ ಬರಿಸುತ್ತಿಲ್ಲ. ಬಹುತೇಕ ರೈತರು ಮಳೆ ಆಗಿಯೇ ಕಾಯುತ್ತಿದ್ದಾರೆ ಎಂದು ಸಾಲ ಸೋಲ ಮಾಡಿ ಬೀಜ,ರಸಗೊಬ್ಬರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.

ಆದರೀಗ ನಿರೀಕ್ಷಿತ ಮಳೆ ಕಣ್ಮರೆಯಾಗಿದೆ. ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಸದ್ಯ ಭಾರೀ ಮಳೆಯ ಸೂಚನೆ ನೀಡಿತ್ತು. ಆದರೀಗ ಎಲ್ಲವೂ ಉಲ್ಟಾ ಆಗಿದ್ದು ರೈತರು ತಲೆಮೇಲೆ ಬೆಳೆ ಸಾಲಕ್ಕೆ ಹಲವಾರು ಕಂಟಕಗಳು ಎದುರಾಗಿದ್ದು ಜಾಮೀನುದಾರರ ಎಡವಟ್ಟು ಮೊತ್ತೊಬ್ಬ ಸಾಲಗಾರರಿಗೆ ಒಂತೊಟ್ಟು ಕಣ್ಣೀರು ತರಿಸುತ್ತಿದೆ.

ಬ್ಯಾಂಕ್ ವ್ಯವಸ್ಥಾಪಕರು ಮಾತ್ರ ತಮ್ಮ ಸಾಲವನ್ನು ಪಡೆಯುವರು ಮತ್ತು ಅದಕ್ಕೆ ಜಾಮೀನು ನೀಡುವವರು ಬ್ಯಾಂಕ್ ನಲ್ಲಿ ಯಾವುದೇ ಕಟ್ ಬಾಕಿ ಹೊಂದುವಂತಿಲ್ಲ. ಯಾವುದೇ ಖಾಸಗಿ ಬ್ಯಾಂಕುಗಳು ರೈತರಿಗೆ ಸಾಲ ನೀಡುತ್ತಿಲ್ಲ.

ಬಂಗಾರದ ಆಭರಣಗಳ ವಹಿವಾಟು ಗಗನಕ್ಕೇರಿದ್ದು  ಕೆಟ್ಟವ ಕೋಡಂಗಿಯಾಗಿದ್ದಾನೆ. ಒಟ್ಟಾರೆ ರೈತರ ಪರ ಸ್ಥಿತಿ ಅಯೋಮಯವಾಗಿದ್ದು ಈ ವಾರದಲ್ಲಿ ಮಳೆಯಾಗದಿದ್ದರೆ ರೈತರಿಗೆ ಸಂಕಷ್ಟ ಗ್ಯಾರಂಟಿ.

ಇಷ್ಟೆಲ್ಲ ಕಷ್ಟ ಅನುಭವಿಸುತ್ತಿರುವ  ರೈತನ ಗೋಳು ಕೇಳಿ ರೈತ ಮಾಡಿದಂತಹ ಸಾಲವನ್ನು ಒಂದು ಮಾಡಲಿ ಮತ್ತು ರಸಗೊಬ್ಬರ ಮೇಲೆ ಏರಿಸಿದ ಬೆಲೆಯನ್ನು ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಬೆಲೆ ನೀಡಲಿ ಎಂದು ರೈತರ ಆಸೆಯಾಗಿದೆ. ಆದರೆ ಕಾಂಗ್ರೆಸ್ ಸರ್ಕಾರವು ರೈತರ ನೋವಿಗೆ ಸ್ಪಂದಿಸಿ ರೈತರಿಗೆ ಸಹಾಯ ಮಾಡಲಿಕ್ಕೆ ಮುಂದೆ ಬರುತ್ತದೆ ಅಥವಾ ರೈತನ ಗೋಳು ಕೇಳದೆ ಹಾಗೆ ಹಾಗೆ ಸುಮ್ಮನೆ ಹಗ್ತಾರ  ಮುಂದೆ ಕಾದು ನೋಡಬೇಕಾಗಿದೆ

Read All News