ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ: ಏಳು ಜನರ ಬಂಧನ : ಸಚಿವ ಪರಂ

  • shivaraj bandigi
  • 14 Jan 2024 , 5:02 PM
  • Belagavi
  • 585

ಬೆಳಗಾವಿ

ಬೆಳಗಾವಿ ತಾಲೂಕಿನ ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯ ಹಲ್ಲೆ ಮಾಡಿದ ಘಟನಾ ಸ್ಥಳಕ್ಕೆ, ಆಸ್ಪತ್ರೆಗೆ ದಾಖಲಾದ ಮಹಿಳೆ ನೋಡಲು ಹೊರಟಿರುವೆ.ಈಗಾಗಲೇ ಏಳು ಜನರನ್ನು ಬಂಧಿಸಿದ್ದು ಅವರನ್ನು ಕೋರ್ಟ್ ಗೆ ಹಾಜರು ಪಡಿಸುತ್ತೇವೆ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

24 ವರ್ಷದ ಅಶೋಕ್ ನಾಯಕ ಎಂಬ ಯುವಕ ಪ್ರಿಯಾಂಕಾ ಎಂಬ ಯುವತಿ ಜೊತೆ ಲವ್ ಮಾಡಿ ಓಡಿ ಹೋಗಿದ್ದಾನೆ. ಓಡಿ ಹೋದ ಮೇಲೆ ಹುಡುಗಿ ಕಡೆಯವರು ಹುಡುಗನ ಮನೆಗೆ ಹೋಗಿದ್ದಾರೆ.ಹುಡುಗನ ತಾಯಿನ ಹೊರಗ ಎಳೆತಂದು ವಿವಸ್ತ್ರ ಮಾಡಿ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಇದು ಗೊತ್ತಾದ ಬಳಿಕ ಸಬ್ ಇನ್ಸ್ಪೆಕ್ಟರ್ ಹೋಗಿ ಆ ಮಹಿಳೆಗೆ ಬಟ್ಟೆ ಕೊಟ್ಟು ಆಸ್ಪತ್ರೆಗೆ ಸೇರಿಸಿದ್ದಾರೆ ಎಂದರು.

ಈ ಘಟನೆಗೆ ಸಂಬಂಧಿಸಿದಂತೆ ಏಳು ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು. ಅಲ್ಲದೆ, ಯುವಕ ಯುವತಿ ಫೋನ್ ಟ್ರ್ಯಾಕಿಂಗ್ ಮಾಡುತ್ತಿದ್ದೇವೆ. ಅವರು ಸಿಕ್ಕಿದ ಬಳಿಕ ಏನು ಕ್ರಮ ಕೈಗೊಳ್ಳಬೇಕೋ ತಗೆದುಕೊಳ್ಳುತ್ತೇವೆ ಎಂದರು.

Read All News