ಬೆಳಗಾವಿ :
ಬೆಳಗಾವಿಯಲ್ಲಿ ಸಚಿವ ಸಂತೋಷ ಲಾಡ್ ಹೇಳಿಕೆ.
ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಾಲಾವಕಾಶ ಕೊಡಲಾಗಿದೆ. ಬರುವ ವಾರದಲ್ಲಿ ಈ ಬಗ್ಗೆ ಮಾತನಾಡುತ್ತೇವೆ.
ಸರ್ಕಾರ ಸಮರ್ಪಕವಾಗಿ ಉತ್ತರ ಕೊಡಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಯತ್ನಾಳ ಹೇಳಿಕೆಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವ ಲಾಡ್. ಯತ್ನಾಳ ಸಾಹೇಬ್ರಿವೆ ಪಬ್ಲಿಸಿಟಿ ಡಿಸೀಜ್ ಇದೆ. ಮಾತನಾಡಲು ಹಲವಾರು ವಿಷಯಗಳಿವೆ. ಸಿಎಂ ಅಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದು ಕೇವಲ ಮುಸ್ಲಿಂ ಪರವಾಗಿನಾ..?
ಮಾಧ್ಯಮದವರನ್ನೆ ಪ್ರಶ್ನೆ ಮಾಡಿದರು.
ಮೊದಲಿನಿಂದಲೂ ಕಾಂಗ್ರೆಸ್ ಮುಸ್ಲಿಂ ತುಷ್ಟಿಕರಣ ಮಾಡಿದೆ ಎಂಬ ವಿಚಾರಕ್ಕೆ ಉತ್ತರಿಸಿದ ಅವರು, ನೆಹರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿಚಾರ ಬಿಡಿ. ಕಳೆದ ಹತ್ತು ವರ್ಷಗಳ ಅವಧಿಯಲ್ಲಾದ ಬೆಳವಣಿಗೆಗಳ ಬಗ್ಗೆ ಮಾತನಾಡಲಿ. ಕಾಂಗ್ರೆಸ್ ಎಲ್ಲ ಸಮುದಾಯದವರನ್ನು ಸಮನಾಗಿ ಕಾಣುತ್ತದೆ. ಕೇಂದ್ರ ಸರ್ಕಾರ ಹಲವಾರು ವಿಷಯಗಳಲ್ಲಿ ವಿಫಲವಾಗಿದೆ. ಮುಸ್ಲಿಂರ ವಿರುದ್ಧವಾಗಿ ಮಾತನಾಡುವ ಯತ್ನಾಳ ಪಿಎಂ ಮೋದಿಯನ್ನು ಯಾಕೆ ಪ್ರಶ್ನೆ ಮಾಡಲ್ಲ. ಪಿಎಂ ಮೋದಿ ಪಾಕಿಸ್ತಾನಕ್ಕೆ ಹೋಗಿ ಕೇಕ್ ತಿಂದು ಬಂದ್ರಲ್ಲ. ಅವರು ಸರ್ಕಾರದ ಶಿಷ್ಟಾಚಾರ ಮುರಿದು ಅಲ್ಲಿಗೆ ಹೋಗಿಬಂದ್ರು. ಸುಮ್ನೆ ಮಾತನಾಡಬೇಕು ಅಂತ ಮಾತನಾಡಬಾರದು.ಯತ್ನಾಳ ಸಾಹೇಬ್ರಿಗೆ ಕೈಮುಗಿದೆ ಕೇಳ್ತಿನಿ.
ಇದನ್ನೆಲ್ಲಾ ಇಲ್ಲಿಗೆ ನಿಲ್ಲಸಬೇಕು ಎಂದರು.