ಯಡಿಯೂರಪ್ಪ, ಬೊಮ್ಮಾಯಿ ವಿರುದ್ಧ ಹರಿಹಾಯ್ದ ಜಾಮದಾರ

  • Shivaraj Bandigi
  • 14 Jan 2024 , 10:22 PM
  • Belagavi
  • 262

ಬೆಳಗಾವಿ : ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ 'ಪ್ರತ್ಯೇಕ ಲಿಂಗಾಯತ ಧರ್ಮ' ಹೋರಾಟ ಮತ್ತೆ ಮುನ್ನಲೆಗೆ ಬಂದಿದೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ವಿಚಾರ ಕುರಿತು ಕೇಂದ್ರ ಸರ್ಕಾರಕ್ಕೆ ಮರು ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯ ಮಾಡಲಾಗಿದೆ ಎಂದು ಡಾ. ಶಿವಾನಂದ ಜಾಮದಾರ ಹೇಳಿದರು.

ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕರ್ನಾಟಕದಲ್ಲಿ ಲಿಂಗಾಯತರು ಅಲ್ಪಸಂಖ್ಯಾತ ಸಮುದಾಯ ಎಂದು ಪರಿಗಣಿಸಿದ ಅಧಿಸೂಚನೆ ರಾಜ್ಯ ಸರ್ಕಾರ ಹೊರಡಿಸಿದೆ. 2018ರ ಮಾರ್ಚ್ 22ರಂದು ರಾಜ್ಯ ಸರ್ಕಾರ ನೋಟಿಫಿಕೇಶನ್ ಹೊರಡಿಸಿದೆ. ಭಾರತ ಸರ್ಕಾರಕ್ಕೆ ಇದನ್ನು ರಾಜ್ಯ ಸರ್ಕಾರ ಕಳಿಸಿತ್ತು. ರಾಜಕೀಯ ಕಾರಣಗಳಿಂದ 8 ತಿಂಗಳು ಅದನ್ನ ಹಾಗೇ ಇಟ್ಟುಕೊಂಡರು ಎಂದರು.

2018ರ ನವೆಂಬರ್ 3ರಂದು ಭಾರತ ಸರ್ಕಾರದವರು ಉತ್ತರ ಕೊಟ್ಟಿದ್ದಾರೆ. ಮೂರು ಕಾರಣಗಳಿಂದ ಮಾನ್ಯತೆ ಮಾಡಲು ಕಷ್ಟವಾಗುತ್ತಿದೆ ಎಂದಿದ್ದಾರೆ. ಲಿಂಗಾಯತರಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರಿದ್ದಾರೆ ಎಂದಿದ್ದಾರೆ. ಹೌದು ಲಿಂಗಾಯತರಲ್ಲಿ ಸಮಗಾರ, ಮಾದರರು ಅಂತಾ ಹಲವರು ಇದ್ದಾರೆ. ಸ್ವತಂತ್ರ ಮಾನ್ಯತೆ ಕೊಟ್ರೆ ಎಸ್‌ಸಿ‌ಎಸ್‌ಟಿ ಸಮುದಾಯದ ಜನರಿಗೆ ಸವಲತ್ತು ಸಿಗಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದರು.
ಇದು ಸಂಪೂರ್ಣ ಸುಳ್ಳು ಹೇಳಿಕೆ ಸತ್ಯಕ್ಕೆ ದೂರವಾದ ಹೇಳಿಕೆ. ಸಿಖ್ ಧರ್ಮದಲ್ಲಿ ದಲಿತರು ಇದ್ದಾರೆ. 1964ರಲ್ಲಿ ಸಿಖ್‌ ಧರ್ಮದ ದಲಿತರಿಗೆ ಇರುವ ಸವಲತ್ತು ಮುಂದುವರಿಸುವ ಬಗ್ಗೆ ರಾಷ್ಟ್ರಾಧ್ಯಕ್ಷರು ಆದೇಶ ಹೊರಡಿಸಿದ್ದರು.
ಬೌದ್ಧ ಧರ್ಮದಲ್ಲಿ ಇರುವ ಎಲ್ಲ ದಲಿತರಿಗೂ ಎಸ್‌ಸಿ ಎಸ್‌ಟಿ ಸವಲತ್ತು ಮುಂದುವರಿಸುವ ಆದೇಶ ಹೊರಡಿಸಿದ್ದಾರೆ. ಅದೇ ರೀತಿಯ ನೋಟಿಫಿಕೇಶನ್ ಹೊರಡಿಸಲು ಇರುವ ತೊಂದರೆಯಾದರ ಏನು? ಎರಡನೇಯದಾಗಿ 1871ರ ಜನಗಣತಿಯಿಂದ ಈವರೆಗೂ ಲಿಂಗಾಯತರನ್ನು ಹಿಂದೂ ಧರ್ಮದ ಪಂಥ ಅಂತಾ ಪರಿಗಣಿಸಲಾಗಿದೆ ಎಂದಿದ್ದಾರೆ. ಇದು ಕೂಡ ಸುಳ್ಳು, ನಮ್ಮ ಹತ್ತಿರ ದಾಖಲೆ ಇದೆ.ಲಿಂಗಾಯತ ಧರ್ಮ ಅದು ಜಾತಿ ಅಲ್ಲ ಅಂತಾ ಹೇಳಿದ ದಾಖಲೆ ಇದೆ.ಲಿಂಗಾಯತ ಹಿಂದೂ ಧರ್ಮದ ಭಾಗ ಅಲ್ಲ ಅಂತಾ ಹೇಳಿದ ದಾಖಲೆ ಇದೆ. 1871ರ ಪುಸ್ತಕದಲ್ಲಿ ದಾಖಲೆ ಇದೆ ಆ ಪ್ರತಿ ನಾವು ಅವರಿಗೆ ಕೊಡುತ್ತೇವೆ ಎಂದರು.

1991ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರ ಆರಂಭವಾಯ್ತು. 2001, 2011, 2013ರಲ್ಲಿ ಈ ವಿಚಾರ ಮುಂದುವರಿಯಿತು.
 ನ್ಯಾ.ನಾಗಮೋಹನದಾಸ್ ಸಮಿತಿ ಡಿಟೇಲ್ ಆಗಿ ಮಾಹಿತಿ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರ ಈಗ ಏನೂ ಮಾಡಬೇಕಿಲ್ಲ. ಕೇಂದ್ರ ಸರ್ಕಾರ ನೀಡಿದ ಮೂರು ಅಂಶಗಳಿಗೆ ರಾಜ್ಯ ಸರ್ಕಾರ ಮರು ಉತ್ತರ ಕಳಿಸಲಿ ಎಂದು ಆಗ್ರಹಿಸಿದರು.

ಸರ್ಕಾರ ಈಗ ಆರಿಸಿ ಬಂದಿದೆ, ತಕ್ಷಣ ಅವರಿಗೆ ಮನವಿ ಕೊಡುತ್ತಿಲ್ಲ. ಅವರು ತಮ್ಮ ಎಲ್ಲ ಸಮಸ್ಯೆ ಪರಿಹಾರ ಮಾಡಿಕೊಂಡು ಶಾಂತ ಮಟ್ಟಕ್ಕೆ ಬರಲಿ. ಎಲ್ಲಾ ಲಿಂಗಾಯತ ಮಠಾಧೀಶರು, ಸಂಘಟನೆಗಳು ಒಳಗೊಂಡು ಮನವಿ ಕೊಡುತ್ತೇವೆ ಎಂದರು.

ಭಾರತ ಸರ್ಕಾರಕ್ಕೆ ಈಗಾಗಲೇ ಕರ್ನಾಟಕ ಸರ್ಕಾರ ವರದಿಯನ್ನು ಒಪ್ಪಿಸಿದೆ.ಭಾರತ ಸರ್ಕಾರದಿಂದಲೂ ಉತ್ತರ ಬಂದಿದೆ ಈಗ ಅದಕ್ಕೆ ಕರ್ನಾಟಕ‌ ಸರ್ಕಾರ ಮರು ಉತ್ತರ ಕೊಡಬೇಕಿದೆ.ಕುಮಾರಸ್ವಾಮಿ ಲಿಂಗಾಯತ ಸ್ವತಂತ್ರ ಧರ್ಮದ ವಿಚಾರದ ಫೈಲ್ ಮುಟ್ಟಲ್ಲ ಎಂದಿದ್ದರು. ಯಡಿಯೂರಪ್ಪ ಸಹ ಲಿಂಗಾಯತ ವಿರೋಧಿಗಳಂತೆ ನಡೆದುಕೊಂಡರು. ಯಡಿಯೂರಪ್ಪ ವಿಭೂತಿಧಾರಿ ಅಲ್ಲ ನಾಮಧಾರಿ ಎಂದು ಕೈ ಸನ್ನೆ ಮಾಡಿ ಪರೋಕ್ಷವಾಗಿ ಹೇಳಿದ ಜಾಮದಾರ. ಬಸವರಾಜ್ ಬೊಮ್ಮಾಯಿ ಅವರ ಚೇಲಾ ಅವರು ಏನೂ ಮಾಡಿದರು ಗೊತ್ತಿದೆ. ಮಹಾರಾಷ್ಟ್ರದಲ್ಲಿ 17 ರ‌್ಯಾಲಿಗಳಾದವು, ಹೈದರಾಬಾದ್ ನಲ್ಲಿ ಕಳೆದ ವಾರ ದೊಡ್ಡ ರ‌್ಯಾಲಿ ಆಯಿತು. ಕರ್ನಾಟಕ ಸರ್ಕಾರ ಮರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸರ್ಕಾರಕ್ಕೆ ಮರು ಉತ್ತರಕ್ಕೆ ಮನವಿ ಮಾಡುತ್ತಿರಾ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೆಸರು ಹೇಳುವುದಿಲ್ಲ ಕರ್ನಾಟಕ ಸರ್ಕಾರ ಅಂತಾ ಹೇಳುವೆ. ಹೆಚ್.ಡಿ.ಕುಮಾರಸ್ವಾಮಿ ಆಗ ಹೇಳಿದ್ದು ಬೇಜವಾಬ್ದಾರಿ ಹೇಳಿಕೆ. ಪಕ್ಷಗಳು ಬರ್ತವೇ ಪಕ್ಷಗಳು ಹೋಗುತ್ತವೆ ಸರ್ಕಾರಗಳು ಶಾಶ್ವತವಾಗಿರುತ್ತವೆ.ಕೇಂದ್ರ ಸರ್ಕಾರ ನೀಡಿದ ಉತ್ತರಕ್ಕೆ ಕರ್ನಾಟಕ ಸರ್ಕಾರ ಮರು ಉತ್ತರ ‌ಕೊಡಬೇಕು. ನ್ಯಾ‌. ನಾಗಮೋಹನದಾಸ ವರದಿ ಈಗಾಗಲೇ ಕೊಡಲಾಗಿದೆ ಅದು ಮೈನಾರಿಟಿ ಕಮಿಷನ್ ವರದಿಯೇ ಅಂತಿ ಎಂದು ವಾದ ಮಂಡಿಸಿದರು.

Read All News