ಅಬ್ಬರದ ಮಳೆಗೆ ಮಲಪ್ರಭಾ, ಪಾಂಡ್ರೆ ನದಿಗೆ ಜೀವಕಳೆ

  • shivaraj bandigi
  • 4 Jul 2024 , 1:08 PM
  • Belagavi
  • 5518

ಬೆಳಗಾವಿ- ಕಳೆದೆರಡು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪುರ ತಾಲೂಕಿನ ಮಲಪ್ರಭಾ ಹಾಗೂ ಪಾಂಡ್ರೆ ನದಿಗೆ ಜೀವಕಳೆ ತುಂಬಿದ್ದು, 



View this post on Instagram

A post shared by localview™️ 🇮🇳 (@localview.in)

ಜಾಂಬೋಟಿ, ಕಣಕುಂಬಿ, ಖಾನಾಪುರದಲ್ಲಿನ ಭಾರಿ ಮಳೆಗೆ ಮಲಪ್ರಭೆಯು ತುಂಬಿ ಹರಿಯುವ ರಬಸಕ್ಕೆ ಖಾನಾಪುರ ತಾಲೂಕಿನ ಹೆಬ್ಬಾನಹಟ್ಟಿ ಗ್ರಾಮದಲ್ಲಿರುವ ಮಾರುತಿ, ಈಶ್ವರ ದೇವಸ್ಥಾನಗಳು ಭಾಗಶಃ ಜಲಾವೃತವಾಗಿವೆ. 

ಪೂಜಾ ಕೈಂಕರ್ಯಗಳು ಸ್ಥಗಿತಗೊಂಡು ಮಾರುತಿ ದರ್ಶನಕ್ಕೆ ಆಗಮಿಸಿದ್ದ ಭಕ್ತರಿಗೂ ನಿರಾಸೆ ಉಂಟಾಗಿ, 

ದೂರದಲ್ಲೇ ನಿಂತು ದರ್ಶನ ಮಾಡಿಕೊಂಡು ತೆರಳುತ್ತಿದ್ದಾರೆ. ಉದ್ಭವ ಮಾರುತಿ ದೇವಸ್ಥಾನ ಅಂತಲೇ ಪ್ರಸಿದ್ಧಿ ಪಡೆದಿರುವ

ದೇವಸ್ಥಾನವು ಜಲಾವೃತಗೊಂಡ ಹಿನ್ನೆಲೆಯಲ್ಲಿ ಮೇಲ್ಭಾಗದಲ್ಲಿ ನಿಂತು ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.

Read All News