ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ 

  • Shivaraj Bandigi
  • 15 Jan 2024 , 11:21 AM
  • Belagavi
  • 234

ಬೈಲಹೊಂಗಲ : ಬೆಂಗಳೂರಿನ ಗುತ್ತಿಗೆದಾರನ ಮನೆಯಲ್ಲಿ ಕೋಟಿ, ಕೋಟಿ ಹಣ ದೊರೆತಿದ್ದು, ಗುತ್ತಿಗೆದಾರ  ಅಂಬಿಕಾಪತಿ  ಜೊತೆಗೆ ಇನ್ನಿತರ  ಕಂಟ್ರಾಕ್ಟರ್  ಹತ್ತಿರವೂ ಕೊಟ್ಯಾಂತರ ರೂ ಹಣ ದೊರಕಿರುವುದು ರಾಜ್ಯಾದ್ಯಂತ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡುತ್ತಿರುವುದು ನೈಜ ವಿಷಯವಾಗಿದೆ ಆದ್ದರಿಂದ ಸಿಎಂ ಮತ್ತು ಡಿಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಮಂಡಲ ಬಿಜೆಪಿ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹಣವು ಕಂಟ್ರಾಕ್ಟರ್‌ಗಳ ಕಮಿಷನ್ ರೂಪದಲ್ಲಿ ಬಂದಿರುವ ಹಣವಾಗಿದೆ ಎನ್ನುವುದು ದಟ್ಟವಾದ ಸುದ್ದಿಯಾಗಿದೆ, ಕಾಂಗ್ರೆಸ್ ಸರ್ಕಾರ ಕಂಟ್ರಾಕ್ಟರ್ ಗಳಿಗೆಂದು ನೀಡಿದ ಬಾಕಿ ೬೫೦ ಕೋಟಿಗೆ ಪ್ರತಿಯಾಗಿ ಕಂಟ್ರಾಕ್ಟರ್ಗಳು  ನೀಡಿದ ಕಮಿಷನ್ ಹಣವೇ ಈ ೪೨ ಕೋಟಿ, ಹಾಗೂ ವಿವಿಧ ಕಡೆ ಸಿಕ್ಕ ಹಣ ಎಂಬುದು  ಸತ್ಯವಾದ ಸುದ್ದಿಯಾಗಿದೆ .

ಇದಲ್ಲದೆ ಇನ್ನೂ ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ಪಂಚ ರಾಜ್ಯ ಚುನಾವಣೆಯ ಕಾಂಗ್ರೆಸ್ ಖರ್ಚಿಗೆ ಕಲೆಕ್ಷನ್ ಮಾಡಲಾಗುತ್ತಿದೆ ಎಂಬುವ ವಿಷಯ ಭಾರಿ ಚರ್ಚೆಯಲ್ಲಿದೆ ,ಕಾಂಗ್ರೆಸ್ ಪಾಲಿಗೆ ಕರ್ನಾಟಕವು ಎಟಿಎಂ ಸರ್ಕಾರ ಆಗಿದೆ ಜೊತೆಗೆ ಕಲೆಕ್ಟನ್ ಕೇಂದ್ರವಾಗಿದೆ , ರಾಜ್ಯದ ಜನತೆ ತುತ್ತು ಅನ್ನಕ್ಕೆ ಪರದಾಡಿ ಬರ ಬಂದು ಒದ್ದಾಡುತ್ತಿದ್ದಾರೆ,  ರೈತರಿಗೆ ಕಿಂಚಿತ್ತೂ ಪರಿಹಾರ ನೀಡಿಲ್ಲ , ವಿದ್ಯುತ್ ಕಡಿತ ವಿಪರೀತವಾಗಿದೆ , ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ, ತುಷ್ಟೀಕರಣದಲ್ಲಿ ಸರ್ಕಾರ ಮುಳುಗಿದೆ, ರಾಜ್ಯದ ಜನತೆಯ ಹಿತ ಕಾಪಡುವಲ್ಲಿ ಸರ್ಕಾರವು  ಸಂಪೂರ್ಣ ವಿಫಲವಾಗಿದೆ, ಸುಳ್ಳು ಗ್ಯಾರಂಟಿ ಗಳೊಂದಿಗೆ ರಾಜ್ಯವನ್ನು ಲೂಟಿ ಮಾಡುತ್ತಿದ್ದು ಕಮಿಷನ್ ದಂದೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು.

ನಾಡಹಬ್ಬ ದಸರಾ ಕಲಾವಿದರೂ ಹತ್ತಿರ ಕೂಡಾ ಪರ್ಸಂಟೆಜ್ ಕೇಳುತ್ತಿರುವುದು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಗೊತ್ತಾಗಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ನಡೆಯಬೇಕಾಗಿದ್ದ ಸರ್ಕಾರ ಪ್ರಜಾವಿರೋಧಿ ನೀತಿಯನ್ನು ಮಾಡುತ್ತಿರುವುದು ಅತ್ಯಂತ ಖಂಡನೀಯ ಮತ್ತು  ಖೇದಕರವಾಗಿದೆ. ಆದ್ದರಿಂದ ಶಿಘ್ರವೇ ರಾಜಿನಾಮೆ ನೀಡದಿದ್ದರೇ ರಾಜ್ಯಾದ್ಯಂತ ಭಾರತೀಯ ಜನತಾ ಪಕ್ಷವು ಬೃಹತ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.  ಮೂಲಕ ಎಚ್ಚರಿಸುತ್ತಿದೇವೆ, ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.  ಒತ್ತಾಯಿಸುತ್ತಿದ್ದೇವೆ.

 ಜಿಲ್ಲಾ ಕಾರ್ಯದರ್ಶಿ ಪುರಸಭೆ ಸದಸ್ಯ ಗುರು ಮೆಟಗುಡ,  ಸಂತೋಷ ಹಡಪದ, ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಮಂಡಲ ಉಪಾಧ್ಯಕ್ಷ ಸುಭಾಶ ತುರಮರಿ, ಮಂಡಲ ಕಾರ್ಯದರ್ಶಿ ನಾಮದೇವ ಸಿಂಗನ್ನವರ,  ಲಕ್ಕಪ್ಪ ಕಾರಗಿ, ಮಂಡಲ ಮಾಧ್ಯಮ ವಕ್ತಾರ ಧಯಾನಂದ ಪರಾಳಶೆಟ್ಟರ, ಸಚಿನ ಕಡಿ , ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಪ್ರಶಾಂತ್ ಅಮ್ಮನಭಾವಿ, ಪುರಸಭೆ ಸದಸ್ಯ ಸಾಗರ ಬಾವಿಮನಿ ,ಮಂಡಲ ಯುವ ಮೋರ್ಚಾ ಉಪಾಧ್ಯಕ್ಷ ಗೌಡಪ್ಪ ಹೊಸಮನಿ, ಸದಾಶಿವ್ ಗೌಡ ಪಾಟೀಲ್, ವೀರೇಶ್  ಭೂಷನವರ್,ಅಜ್ಜಪ್ಪ ಹೊಸೂರ್ ಸಿ, ಜಿ, ವಿಭೂತಿಮಠ , ಕಿರಣ್ ಶಿರವಂತಿ, ಬಸವರಾಜ ಅಂಗಡಿ , ಫಕ್ರುಸಾಬ ನದಾಫ, ರವಿ ತುರಮರಿ, ಆತ್ಮಾನಂದ ಅಬ್ಬಾಯಿ, ಸುನೀಲ‌ ಮಾಳೊದೆ, ಮಲ್ಲಿಕಾರ್ಜುನ ಮೆಟಗುಡ್ಡ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

Read All News