ಗುರುವಾರ ಕುಂದಾನಗರಿಗೆ ಕೇಂದ್ರ ಸಚಿವ ನೀತಿನ ಗಡ್ಕರಿ

  • 14 Jan 2024 , 9:30 PM
  • Belagavi
  • 94

ಬೆಳಗಾವಿ: ಲೊಕಸಭಾ ಉಪಚುನಾವಣೆ ಪ್ರಚಾರಕ್ಕೆ ಗುರುವಾರ ಬೆಳಗಾವಿಗೆ ಕೇಂದ್ರ ಸಾರಿಗೆ ಸಚಿವ ನೀತಿನ ಗಡ್ಕರಿ ಆಗಮಿಸಲಿದ್ದು ಅವರ ಆಗಮನಕ್ಕೆ ಮತ್ತು ಚುನಾವಣೆಯ ಮುಂದಿನ ಕಾರ್ಯ ತಂತ್ರದ ಬಗ್ಗೆ ಬಿಜೆಪಿ ಮುಖಂಡರ ಜೋತೆ ಕೇಂದ್ರ ಸಚಿವ ಪ್ರಲ್ಲಾದ ಜೋಷಿಯವರು.

ಚಿಕ್ಕೊಡಿ ಸಂಸದ ಅಣ್ಣಾಸಾಹೇಬ ಜೋಲ್ಲೆ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ್, ವಿಭಾಗ ಪ್ರಭಾರಿ ಬಸವರಾಜ ಕವಟಗಿ, ಸಹ ಸಂಘಟನಾ ಕಾರ್ಯದರ್ಶಿ ಬಸವರಾಜ ಯಕ್ಕಂಚಿ, ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಮಾಧ್ಯಮ ವಿಭಾಗ ಪ್ರಭಾರಿ ಸಿದ್ದು ಮೂಗಲಿಶೆಟ್ಟರ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಜೋತೆ ಚುನಾವಣೆಯ ಮುಂದಿನ ಕಾರ್ಯ ಯೋಜನೆಯ ಬಗ್ಗೆ ಮಾತುಕತೆ ನಡೆಸಿದರು.

ಬೆಳಗಾವಿ ಲೊಕಸಭೆಯ ಉಪಚುನಾವಣೆಯಲ್ಲಿ ಬಹಿರಂಗ ಸಭೆಗಳನ್ನು ಆಯೋಜಿಸುವ ಮೂಲಕ ಭರ್ಜರಿ ಪ್ರಚಾರ ನಡೆಸಿದ್ದ ಬಿಜೆಪಿ 15ರ ವರೆಗೆ ಮತ್ತಷ್ಟು ಕೇಂದ್ರ ಹಾಗೂ ರಾಜ್ಯದ ಸಚಿವರ ತಂಡ ಬಹಿರಂಗ ಸಮಾರಂಭಕ್ಕೆ ಆಗಮಿಸುವ ನೀರಿಕ್ಷೆ ಇದೆ. ಬಿಜೆಪಿ ಗೆಲುವು ತಮ್ಮದೆ ಎಂದು ತಳಿದರು ಸುಮ್ಮನೆ ಕುಳಿತುಕೊಳ್ಳುವ ಜಯಮಾನವಲ್ಲ.

ಕಾಂಗ್ರೆಸ್ ಪಾಳೆಯದ ಪ್ರತಿಯೊಂದ ಚಟುವಟಿಕೆ , ಹೇಳಿಕೆಗಳ ಬಗ್ಗೆ ಗಮನಹರಿಸುತ್ತಿದೆ. ಮತದಾನಕ್ಕೆ ದಿನ ಗಣನೆ ಪ್ರಾರಂಭವಾಗಿದ್ದರಿಂದ ಅಂತಿಮ ಪ್ರಚಾರದ ತಯಾರಿ ಬಿರುಸಿನಿಂದ ಎರಡು ಪಕ್ಷಗಳಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಒಂದು ಕಡೆ ಬಹಿರಂಗ ಸಮಾವೇಶ, ಮನೆ ಮನೆ ಸಂಪರ್ಕ, ಮತ್ತೊಂದು ಕಡೆ ಪಕ್ಷದ ಪದಾಧಿಕಾರಿಗಳ ಚುನಾವಣೆಯ ಅಂತಿಮ ರಣತಂತ್ರ ಹೆಣೆಯುತ್ತಿದ್ದಾರೆ.

ಈ ಚುನಾವಣೆಯಲ್ಲಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಉಪಸಭಾಪತಿ, ಆನಂದ ಮಾಮನಿ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಅನೀಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಮಹಾನಗರ ಅಧ್ಯಕ್ಷ ಶಶಿ ಪಾಟೀಲ ಪಕ್ಷದ ಪದಾಧಿಕಾರಿಗಳು ವಿಶ್ರಮಿಸಿದೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Read All News