ಪೃಥ್ವಿ ಸಿಂಗ್ ಫೌಂಡೇಷನ್ ಸೇವೆ ಶ್ಲಾಘನೀಯ: ಸಂಜಯ ಪಾಟೀಲ

  • 30 Dec 2023 , 12:09 PM
  • Belagavi
  • 120

ಬೆಳಗಾವಿ :ಕೊರೋನಾ ಸೋಂಕಿನ ಪಾರಾಗಲು ಹೋರಾಟ ನಡೆಸುತ್ತಿರುವ ಬೆಳಗಾವಿ ಜನತೆಗೆ ಪೃಥ್ವಿ ಸಿಂಗ್ ಪೌಂಡೇಷನ್‌ನಿಂದ ನಿರ್ಗತಿಕರು, ಬಡವರಿಗೆ ಆಹಾರ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.

ಶನಿವಾರ ಹಿಂಡಲಗಾ ಗಣೇಶ ಮಂದಿರದ ಬಳಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಪೃಥ್ವಿ ಸಿಂಗ್ ಪೌಂಡೇಷನ್‌ನಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದರು. ಕೊರೋನಾ ಸಂಕಷ್ಟದ ಕಾಲದಲ್ಲಿ ಬಡವರು, ನಿರ್ಗತಿಕರಿಗೆ ಹಾಗೂ ಪೌರಕಾರ್ಮಿಕರಿಗೆ ಪೃಥ್ವಿ ಸಿಂಗ್ ಪೌಂಡೇಷನ್‌ನಿಂದ ಒಂದು ತಿಂಗಳಿಗೆ ಬೇಕಾಗುವ ಆಹಾರ ಸಾಮಗ್ರಿಯನ್ನು ಉಚಿತವಾಗಿ ವಿತರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

ಇದರ ಜತೆಗೆ ಕೊರೋನಾ ವಿರುದ್ದ ಹೋರಾಡಲು ಸರಕಾರದ ಮಾರ್ಗಸೂಚಿಗಳನ್ನು ಎಲ್ಲರು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ ನಿರಂತರವಾಗಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಮಹಾಮಾರಿಯ ವಿರುದ್ದ ಹೋರಾಟ ನಡೆಸಬೇಕಿದೆ.

ಈ ರೋಗಕ್ಕೆ ಹೆದರುವ ಅಗತ್ಯವಿಲ್ಲ. ಮುನ್ನೆಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದರು. ಬೆಳಗಾವಿ ನಗರ ಸೌಂದರ್ಯವಾಗಿರಬೇಕೆಂದರೇ ಪೌರ ಕಾರ್ಮಿಕರ ಶ್ರಮ ಸಾಕಷ್ಟಿದೆ. ದೇಶಕ್ಕೆ ಬಂದಿರುವ ಕೊರೋನಾ ಹೋಗುತ್ತದೆ. ಆದರೆ ಪೌರ ಕಾರ್ಮಿಕರು ಮಾಡುತ್ತಿರುವ ಕಾರ್ಯ ಎಂದಿಗೂ ಹೋಗುವುದಿಲ್ಲ. ಪೌರ ಕಾಮಿರ್ಕರು ಕೊರೋನಾ ಸೋಂಕಿನ ವಿರುದ್ದ ಹೋರಾಟ ನಡುವೆ ನಗರವನ್ನು ಶುಚಿಗೊಳಿಸುತ್ತಿರುವ ನಿಮ್ಮ ಕಾರ್ಯ ಅನನ್ಯವಾಗಿದೆ.

ಇಂಥವರಿಗೆ ಪೃಥ್ವಿ ಸಿಂಗ್ ಪೌಂಡೇಷನ್‌ನಿಂದ ಆಹಾರ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಶಾಸಕ ಅನಿಲ್ ಬೆನಕೆ ಮಾತನಾಡಿ, ಪೌರ ಕಾಮಿರ್ಕರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಪೃಥ್ವಿ ಸಿಂಗ್ ಪೌಂಡೇಷನ್ ನಗರದ ಪೌರ ಕಾರ್ಮಿಕರಿಗೆ ಆಹಾರದ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಪೃಥ್ವಿ ಸಿಂಗ್ ಮಾತನಾಡಿ, ಇಡೀ ದೇಶವೇ ಕೊರೋನಾ ವಿರುದ್ದ ಹೋರಾಟ ನಡೆಸುತ್ತಿದೆ.

ಬೆಳಗಾವಿಯಲ್ಲಿರುವ ಬಡ ಜನರು ಹಾಗೂ ಪೌರ ಕಾರ್ಮಿಕರಿಗೆ ಸಂಕಷ್ಟವಾಗಬಾರದು ಎನ್ನುವ ನಿಟ್ಟಿನಲ್ಲಿ ನಮ್ಮ ಪೃಥ್ವಿ ಸಿಂಗ್ ಪೌಂಡೇಷನಿನ ತಂಡದವರು ಉಚಿತವಾಗಿ ಆಹಾರ ಸಾಮಗ್ರಿ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡುತ್ತಿದ್ದೇವೆ. ಈ ಹಿಂದೆಯೂ ನಾವು ಕೊರೋನಾ ಸೋಂಕಿತ ವ್ಯಕ್ತಿಗಳಿಗೆ ಆಕ್ಸಿಜನ್ ನೀಡುವ ಕೆಲಸ ಮಾಡಿದ್ದೇವೆ.

ಸರಕಾರದ ಸುತ್ತೋಫಲೆಯಿಂದ ಸದ್ಯ ಆಕ್ಸಿಜನ್ ಸಿಗುತ್ತಿಲ್ಲ. ಜಿಲ್ಲಾಡಳಿತಕ್ಕೆ ನಮ್ಮಂಥ ಪೌಂಡೇಶನ್‌ಗಳಿಗೆ ಐದು ಆಕ್ಸಿಜನ್ ಸಿಲೆಂಡರ್ ನೀಡಿದರೆ ಸೋಂಕಿತರ ಜೀವ ಉಳಿಸಲು ನಮ್ಮ ಪ್ರಯತ್ನ ಮಾಡುತ್ತೇವೆ ಎಂದರು.

Read All News