ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಅಂತರ್ಯಾಮಿ ಫೌಂಡೇಶನ್ ನಡುವೆ ಒಪ್ಪಂದ.

  • Shivaraj Bandigi
  • 14 Jan 2024 , 10:30 PM
  • Belagavi
  • 477

ಬೆಳಗಾವಿ : ಸಮಾಜದ ಒಳಿತಿಗೆ ಮತ್ತು ಆರೋಗ್ಯಕರ ಪರಿಸರ ಬೆಳೆಸುವ ದೃಷ್ಠಿಯಿಂದ ಈಗಿನ ಯುವ ಪೀಳಿಗೆಯ ವಿದ್ಯಾರ್ಥಿಗಳ ಪಾಲು ಬಹುಮುಖ್ಯವಾದ್ದರಿಂದ ದಿನಾಂಕ ೨೦/೦೨/೨೦೨೩ ರಂದು ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ ಮತ್ತು ಅಂತರ್ಯಾಮಿ ಫೌಂಡೇಶನ್, ಬೆಳಗಾವಿ ಜಿಲ್ಲಾದ್ಯಂತ  ಹೆಚ್ಚಿನ ಸಾಮಾಜಿಕ ಚಟುವಟಿಕೆಗಳನ್ನ ಹಮ್ಮಿಕೊಳ್ಳುವ ಉದ್ದೇಶದಿಂದ ಪರಸ್ಪರ ಒಪ್ಪಂದದ ಒಡಂಬಡಿಕೆಯನ್ನ ಮಾಡಿಕೊಂಡವು. 

ಎಸ್.  ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ ಯಲ್ಲಿ ನಡೆದ ಒಡಂಬಡಿಕೆ ವಿನಿಮಯ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಫ್. ವಿ. ಮಾನ್ವಿ, ಪ್ರಾಚಾರ್ಯರಾದ ಡಾ. ಬಿ. ಆರ್. ಪಟಗುಂದಿ, ಅಂತರ್ಯಾಮಿ ಫೌಂಡೇಷನ್ನಿನ ಅಧ್ಯಕ್ಷರಾದ ಶ್ರೀ. ನಾಗರಾಜ ಗಸ್ತಿ,  ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗ ಮುಖ್ಯಸ್ಥರಾದ ಪ್ರೊ. ಮಂಜುನಾಥ ಶರಣಪ್ಪನವರ ಹಾಗೂ ಇನ್ನಿತಿರ ಆಡಳಿತಾತ್ಮಕ ಸದಸ್ಯರು ಉಪಸ್ಥಿತರಿದ್ದರು.

Read All News