ಗಡಿಯಲ್ಲಿ ಪುಂಡಾಟ ನಡೆಸಿದ ಎಂಇಎಸ್

  • shivaraj bandigi
  • 15 Jan 2024 , 8:05 AM
  • Belagavi
  • 611

ಬೆಳಗಾವಿ :

ಬೆಳಗಾವಿಯಲ್ಲಿ ಎಂಇಎಸ್ ಗೆ ಮಹಾಮೇಳಾವ್ ನಡೆಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಎಂಇಎಸ್, ಶಿವಸೇನೆ ಪುಂಡರು ಕಿರಿಕ್ ಮಾಡಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ ಹಿನ್ನೆಲೆಯಲ್ಲಿ ಇದರ ವಿರುದ್ಧ ವಾಗಿ ಪ್ರತಿ ವರ್ಷ ಅಧಿವೇಶನ ವಿರೋಧಿಸಿ ಮಹಾಮೇಳಾವ್ ಆಯೋಜಿಸುತ್ತಿದ್ದ ಎಂಇಎಸ್ ಗೆ ಈ ಬಾರಿ ಮೇಳಾವ್ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ.

ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್‌ಗೆ ನಿಷೇಧ ಮಾಡಿದ್ದರಿಂದ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಎಂಇಎಸ್ ಶಿವಸೇನೆ ಪುಂಡರು ಹೊಸ ನಾಟಕ ಆರಂಭಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮೇಳಾವ್ ನಡೆಸಿ ಸರಕಾರಕ್ಕೆ ಸೆಡ್ಡು ಹೊಡೆಯುವ ವಿಫಲ ಯತ್ನ‌ ನಡೆಸಿದ್ದಾರೆ.

ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್, ಶಿವಸೇನೆ ಪುಂಡರು, ಕರ್ನಾಟಕ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಾಡದ್ರೋಹಿ ಎಂಇಎಸ್‌ಗೆ ಶಿವಸೇನೆ ಉದ್ಧವ್ ಠಾಕ್ರೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸಾಥ್ ನೀಡಿದರು.

ಮಹಾರಾಷ್ಟ್ರದ ಶಿನೋಳಿಯಿಂದ ಎಂಇಎಸ್, ಶಿವಸೇನೆ ಪುಂಡರ ಪ್ರತಿಭಟನಾ ಮೆರವಣಿಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕಿನ ಶಿನೋಳಿ ನಡೆದಿದೆ.

ಕರ್ನಾಟಕ ಮಹಾರಾಷ್ಟ್ರ ಸಂಪರ್ಕಿಸುವ ರಸ್ತೆ ತಡೆದು ಪ್ರತಿಭಟನೆಗೆ ಮುಂದಾದ ಎಂಇಎಸ್ ಶಿವಸೇನೆ ಬೆಳಗಾವಿ ಚಳಿಗಾಲದ ಅಧಿವೇಶನ ವಿರೋಧಿ ಎಂಇಎಸ ಮತ್ತು ಶಿವಸೇನೆ ಯಿಂದ ಗಡಿಯಲ್ಲಿ ತಗಾದೆ ತಗೆದಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಬೀಗಿ ಪೊಲೀಸ್ ಭದ್ರತೆ ಕರ್ನಾಟಕ, ಮಹಾರಾಷ್ಟ್ರ ಪೊಲೀಸರಿಂದ ಗಡಿಯಲ್ಲಿ ಭದ್ರತೆ ಒದಗಿಸಲಾಗಿದೆ.

Read All News