ರಾಜ್ಯ ಹೆದ್ದಾರಿ ಕಾಮಗಾರಿ ಅಧಿಕಾರಿಗಳಿಂದ ಪರಿಶೀಲನೆ

  • Krishna Shinde
  • 14 Jan 2024 , 11:22 PM
  • Chikballapur
  • 175

ಶಿಡ್ಲಘಟ್ಟ: ದಿಬ್ಬೂರಹಳ್ಳಿ-ಸಾದಲಿ ರಾಜ್ಯ ಹೆದ್ದಾರಿ 10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ರಸ್ತೆಯ ವಾಸ್ತವಿಕ ಸ್ಥಿತಿಗತಿಯನ್ನು ಹಿರಿಯ ಅಧಿಕಾರಿಗಳ ತಂಡ  ಪರಿಶೀಲನೆ ನಡೆಸಿತು.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಎಂಜಿನಿಯರ್ ರಾಮಕೃಷ್ಣ , ಅಧೀಕ್ಷಕ ಎಂಜಿನಿಯರ್ ಮೂಡಲಗಿರಿ, ಕಾರ್ಯನಿರ್ವಾಹಕ ಅಭಿಯಂತರ ಲೋಕೇಶ್  ಸೇರಿದಂತೆ ಎಂಟು ಜನ ಹಿರಿಯ ಅಧಿಕಾರಿಗಳ ತಂಡ ದಿಬ್ಬೂರಹಳ್ಳಿ-ಸಾದಲಿ ನಡುವಿನ ರಸ್ತೆ ಖುದ್ದಾಗಿ ಪರಿಶೀಲಿಸಿದರು.

ಈ ವೇಳೆ ಗುತ್ತಿಗೆದಾರರಿಗೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಎಂಜಿನಿಯರ್ ರಾಮಕೃಷ್ಣ ರಸ್ತೆ ಸುರಕ್ಷತಾ ಸೂಚನೆಗಳನ್ನು ತಿಳಿಸಿದರು. ಈಗ ಬೇಸಿಗೆಕಾಲ ರಸ್ತೆ ದುರಸ್ತಿ ನಡೆಯುವ ಸಮಯದಲ್ಲಿ ಧೂಳು ಹೆಚ್ಚು ಹೇಳಬಹುದು ಆದ್ದರಿಂದ ಪ್ರತಿಯೊಂದು ತಾಸು ನಂತರ ನೀರನ್ನು ಹಾಕಬೇಕೆಂದು ತಿಳಿಸಿದರು.

ಈ ರಸ್ತೆ ಕಾಮಗಾರಿಯಲ್ಲಿ ಎರಡು ಕೆರೆಕಟ್ಟೆಗಳು ಬರುತ್ತವೆ ಅಲ್ಲಿ ಬಹಳ ಸೂಕ್ಷ್ಮವಾಗಿ ಕಾಮಗಾರಿ ನಡೆಯಬೇಕು ರಸ್ತೆಯ ತಡೆಗೋಡೆಗಳನ್ನು ಸಹ ನಿರ್ಮಿಸಬೇಕು.ರಸ್ತೆ ಗುಣಮಟ್ಟ ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳದಾಗುವುದೆಂದು ಸೂಚಿಸಿದರು.

Read All News