ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಗ್ಯಾರೇಜ್

  • shivaraj bandigi
  • 19 Jun 2024 , 5:04 PM
  • Athani
  • 4275

ಅಥಣಿ : ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ಗ್ಯಾರೇಜ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಥಣಿ -ಖಿಳೆಗಾಂವ ರಾಜ್ಯಾ ಹೆದ್ದಾರಿ ಪಕ್ಕ ವ್ಯಾಪಾರ ಮಳಿಗೆಯಲ್ಲಿದ್ದ ಸಚಿನ್ ಕೊಡಗ ವ್ಯಕ್ತಿಯ ಮಾಲೀಕತ್ವದ ಡಿ ಕೆ ಗ್ಯಾರೇಜ್ ಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಗ್ಯಾರೇಜ್ ನಲ್ಲಿದ್ದ ಮೂರು ಬೈಕ್, ಟೈರ್, ಒಯಿಲ್ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮವಾಗಿದೆ.

ಸ್ಥಳಕ್ಕೆ ಅಥಣಿ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಎಶಸ್ವಿಯಾಗಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ವರದಿ  :  ರಾಹುಲ್   ಮಾದರ 

Read All News