ಬೆಳಗಾವಿ :
ಸುದೈವಿ ಮಕ್ಕಳ ಆಸರೆಗಾಗಿ ಫೆ.4 ರಂದು ಇಲ್ಲಿನ ಕುಮಾರ ಕಲಾ ಮಂದಿರದಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ವಿನಾಯಕ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆರೈಕೆ ಕೇಂದ್ರದಲ್ಲಿರುವ ಮಕ್ಕಳಿಗೆ ಅನುಕೂಲಕ್ಕಾಗಿ ಕಾಮಿಡಿ, ಫ್ಯಾಶನ್ ಶೋ ಹಾಗೂ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಿಂದ ಬರುವ ಹಣವನ್ನು ಎಲ್ಲ ಆರೈಕೆ ಕೇಂದ್ರದ ಮಕ್ಕಳಿಗೆ ನೀಡಲಾಗುವುದು ಎಂದರು.
ಹಾಸ್ಯ ಕಲಾವಿದ ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ, ಚಂದ್ರಪ್ರಭಾ, ಸಿಮಾ ಸೆರೋ ಆಗಮಿಸಲಿದ್ದಾರೆ. ಪ್ರವೇಶದ ದರ 100 ರಿಂದ 500 ರೂ. ವರೆಗೆ ಇದೆ. ಆಸಕ್ತ ಕಲಾವಿದರು ಆಗಮಿಸಬೇಕೆಂದು ಕೋರಿಸರು.
ಅಶೋಕ ದೇವ ಉಪಸ್ಥಿತರಿದ್ದರು.