ವಿದೇಶಿ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ EduTech ಕಂಪನಿಗಳು ನೀಡುವ ಆನ್‌ಲೈನ್ ಪಿಎಚ್‌ಡಿ ಕಾರ್ಯಕ್ರಮಗಳ ಜಾಹೀರಾತುಗಳಿಂದ ತಪ್ಪುದಾರಿಗೆಳೆಯದಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಯು ಜಿ ಸಿ ಸಲಹೆ ನೀಡಿದೆ.
ಇಂತಹ ಆನ್‌ಲೈನ್ ಪಿಎಚ್‌ಡಿ ಕಾರ್ಯಕ್ರಮಗಳನ್ನು ಯುಜಿಸಿ ಮಾನ್ಯತೆ ನೀಡುವುದಿಲ್ಲ ಎಂದು ತಿಳಿಸಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, Ph.D ಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ವಿನಂತಿಸಲಾಗಿದೆ. ಪ್ರವೇಶವನ್ನು ತೆಗೆದುಕೊಳ್ಳುವ ಮೊದಲು ಯುಜಿಸಿ ನಿಯಮಗಳನ್ನು ತಿಳಿದು ಕೊಳ್ಳಲು ಯುಜಿಸಿ ಒತ್ತಾಯಿಸಿದೆ.