ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ರದ್ದುಪಡಿಸಿ: ದೀಪಕ ಗುಡಗನಟ್ಟಿ

  • krishna s
  • 23 Jan 2025 , 11:25 AM
  • Belagavi
  • 1117

ಬೆಳಗಾವಿ:ಬೆಳಗಾವಿ ಜಿಲ್ಲೆಯ ಜನತೆ ವಿರುದ್ಧದ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರ ತಕ್ಷಣವೇ ಹಿಡಕಲ್ ಜಲಾಶಯದಿಂದ ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 0.5 ಟಿಎಂಸಿ ನೀರು ಪೂರೈಸುವ ಯೋಜನೆ ರದ್ದುಪಡಿಸಬೇಕು! ಈ ಬಗ್ಗೆ ದೀಪಕ ಗುಡಗನಟ್ಟಿ ಅವರು ತೀವ್ರ ಎಚ್ಚರಿಕೆ ನೀಡಿದ್ದಾರೆ.

ಹಿಡಕಲ್ ಜಲಾಶಯ ಬೆಳಗಾವಿ ಜಿಲ್ಲೆಯ ಹೃದಯವಾಗಿದ್ದು, ಬೆಳಗಾವಿ ಮಹಾನಗರ ಮತ್ತು ನೂರಾರು ಗ್ರಾಮಗಳಿಗೆ ನೀರು ಪೂರೈಸುವ ಪ್ರಮುಖ ಮೂಲವಾಗಿದೆ. ಬೇಸಿಗೆಕಾಲದಲ್ಲಿ ಜಲಾಶಯ ಖಾಲಿಯಾಗುವುದರಿಂದ ಜನರು ಮತ್ತು ರೈತರು ನೀರಿನ ತೀವ್ರ ದುರಂತವನ್ನು ಎದುರಿಸುತ್ತಾರೆ. ಈ ಸ್ಥಿತಿಯಲ್ಲಿ ಕೈಗಾರಿಕಾ ಬಳಕೆಗೆ ಹಿಡಕಲ್ ಜಲಾಶಯದ ನೀರು ನೀಡಲು ನಾವು ಯಾವುದೇ ರೀತಿಯ ಸಮ್ಮತಿ ನೀಡುವುದಿಲ್ಲ! ಎಂದು ಗುಡಗನಟ್ಟಿ ಘೋಷಿಸಿದರು.ನವೀಲು ತೀರ್ಥ ಜಲಾಶಯದಿಂದ ಈಗಾಗಲೇ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಸಲಾಗುತ್ತಿದೆ. ಆದರೆ ಈಗ ಹಿಡಕಲ್ ಜಲಾಶಯದಿಂದ ಕೈಗಾರಿಕಾ ಪ್ರದೇಶಗಳಿಗೆ ನೀರು ಕಳಿಸಲು ಸರ್ಕಾರ ಯೋಜನೆ ರೂಪಿಸಿರುವುದು ಬೆಳಗಾವಿಯ ರೈತರ ಮತ್ತು ಜನರ ಹಿತಾಸಕ್ತಿಗೆ ಮುಟ್ಟಿ ಮಾತಿದೆ.ಬೆಳಗಾವಿ ಜಿಲ್ಲೆಯ ನಂಬಿಕೆ ಮತ್ತು ಭವಿಷ್ಯವನ್ನು ತೊಡೆದು ಹಾಕುವ ಈ ಯೋಜನೆ ನಮ್ಮ ಜಿಲ್ಲೆಗೆ ನಾಶಕಾರಿಯಾಗುವುದು!.

ಸಮಸ್ಯೆಗೆ ಕಿವಿಗೊಡದಿದ್ದರೆ ತೀವ್ರ ಹೋರಾಟ ಗ್ಯಾರಂಟಿ:ಸರ್ಕಾರ ಈ ಯೋಜನೆಯನ್ನು ತಕ್ಷಣವೇ ರದ್ದು ಮಾಡದಿದ್ದರೆ, ಬೆಳಗಾವಿಯ ಜನತೆ ಮತ್ತು ರೈತರು ಒಂದುಗೂಡಿಸಿ ಕಾಮಗಾರಿಯನ್ನು ತಡೆಯುವ ಹೋರಾಟ ಆರಂಭಿಸಲಿದ್ದಾರೆ! ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಬಂಡಾಯ ಅನಿವಾರ್ಯ ಎಂದು ಗುಡಗನಟ್ಟಿ ಅವರು ತೀವ್ರ ಎಚ್ಚರಿಕೆ ನೀಡಿದರು.

ನೀರು ನಮ್ಮ ಹಕ್ಕು, ಹಿಂಜರಿಯುವುದಿಲ್ಲ:ಹಿಡಕಲ್ ಜಲಾಶಯದಿಂದ ನೀರು ಕಸಿದುಕೊಳ್ಳಲು ಪ್ರಯತ್ನಿಸುವ ಪ್ರತಿಯೊಬ್ಬರಿಗೂ ಕಠಿಣ ಪ್ರತಿಕ್ರಿಯೆ ಎದುರಾಗುವುದು ಖಚಿತ. "ಸರ್ಕಾರನೂ ಹೊಡೆಯಲು ಬರುವವರ ಹೋಡೆಯಲು ನಾವು ಹಿಂದೊಗ್ಗುವುದಿಲ್ಲ!" ಬೆಳಗಾವಿ ಜಿಲ್ಲೆ ತನ್ನ ಹಕ್ಕನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಹೋರಾಟ ನಡೆಸಲಿದೆ.

ಬೆಳಗಾವಿ ಜಿಲ್ಲೆಯ ಹಿತಕಾಯುವ ಈ ಬೇಡಿಕೆಗೆ ಸ್ಪಂದಿಸದಿದ್ದರೆ ಸರ್ಕಾರನ ವಿರುದ್ಧ ಹೋರಾಟದ ಮಹಾಸಮರ ಎದ್ದೇಳಲಿದೆ. ಸಮಯ ಈಗಲೇ ಇದೆ - ಈ ಯೋಜನೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಎಂಬ ಖಡಕ್ ಸಂದೇಶವನ್ನು ದೀಪಕ ಗುಡಗನಟ್ಟಿ ನೀಡಿದರು.

Read All News