ಕೋರ್ಟ್ ಹಾಲ್ ಬಳಿ ಕೈದಿಯಿಂದ ಪಾಕ್ ಪರ ಘೋಷಣೆ ಪ್ರಕರಣ ಮಾಹಿತಿ ನೀಡಿದ ಡಿಸಿಪಿ ರೋಹನ್ ಜಗದೀಶ್

  • shivaraj bandigi
  • 12 Jun 2024 , 9:03 AM
  • Belagavi
  • 3843

ಬೆಳಗಾವಿ : ಇಲ್ಲಿನ 4ನೇ ಜೆ ಎಂ ಎಫ್ ಸಿ ಕೋರ್ಟ್ ಹಾಲನಲ್ಲಿ ಪಾಕಪರ ಘೋಷಣೆ ಕೂಗಿದ್ದ ಆರೋಪಿಯ ವಿಚಾರಣೆ ನಡೆಯುತ್ತಿದ್ದು, ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಲಯದಲ್ಲಿ ಪೋಲಿಸ್ ಬಂಧನಕ್ಕೆ ಕೇಳಿ ಮನವಿ ಮಾಡಲಾಗುವದು ನಂತರ ತನಿಖೆ ಮುಂದುವರೆಸಲಾಗುವದು ಎಂದು ಡಿಸಿಪಿ ರೋಹನ ಜಗದೀಶ ಮಾಹಿತಿ ನೀಡಿದರು. 

 ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಜಯೇಶ ಪೂಜಾರಿ ಎನ್ನುವ ಆರೋಪಿಯನ್ನು ಬೆಳಗ್ಗೆ 11 ಗಂಟೆಗೆ ಕೋರ್ಟ್ ಗೆ ಹಾಜರು ಪಡಿಸಿದ ಸಂದರ್ಭದಲ್ಲಿ ಈ ಕೃತ್ಯ‌ ನಡೆದಿದ್ದು, ಖೈದಿ ಜಯೇಶ ಪೂಜಾರಿ ಶಾಕೀರ್ ಮೊಹಮ್ಮದ್ ಆಗಿ ಮತಾಂತರ ಆಗಿದ್ದಾನೆ. ಆರೋಪಿಯ ವಿರುದ್ಧ ಡಬಲ್ ಮರ್ಡರ್ ಹಾಗೂ 

ಕೇಂದ್ರ ಸಚಿವ ನಿತಿನ್ ಗಡ್ಕರಿ, ಎಡಿಜಿಪಿ ಅಶೋಕ್ ಕುಮಾರ್ ಅವರಿಗೆ ಫೋನ್ ಮೂಲಕ ಬೇದರಿಕೆ ಹಾಕಿರುವ ಕೇಸಗಳು ಇವೆ. 2018ರ ಎಡಿಜಿಪಿ ಅಲೋಕ್ ಕುಮಾರ್ ಗೆ ಬೇದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ

ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಈ ಕುರಿತು ವಿಚಾರಣೆಗೆ ಇಂದು ಕೋರ್ಟ್ ಗೆ ಹಾಜರು‌ ಪಡಿಸಲಾಗಿತ್ತು, ಈತ 

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆಗೆ ಒಳಗಾದ ಕೈದಿಯಾಗಿ ಇದ್ದಾ‌ನೆ.

ನ್ಯಾಯಾಲಯದಲ್ಲಿ ಪಾಕ್ ಘೋಷಣೆ ಕೂಗಿರುವ ಸಂಬಂಧ 

ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ವಿಚಾರಣೆ ಮಾಡತೇವಿ. ದಕ್ಷಿಣ ಕನ್ನಡದ ಡಬಲ್ ಮರ್ಡರ್ ಕೇಸ್ ನಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಆಗಿದ್ದು, 

ಹಿಂಡಲಗಾ ಜೈಲಿನಲ್ಲಿ ಕಳೆದ ಕೆಲ ವರ್ಷಗಳಿಂದ ಇದ್ದು,

ಜೈಲಿನಲ್ಲಿ ಇದ್ದಾಗ 14 ವರ್ಷದ ನಂತರ ಕೇರಳಾಗೆ ಓಡಿ ಹೋಗಿರುತ್ತಾನೆ.

ಪಾಕ್ ಪರ ಘೋಷಣೆ ಮಾಡಿರುವ ಹಿನ್ನಲೆಯ ಕುರಿತು ಯಾಕೆ ಘೋಷಣೆ ಮಾಡಿದ ಅಂತಾ ತನಿಖೆ ಮಾಡುತಿದ್ದು,

ಪ್ರಾಥಮಿಕ ತನಿಖೆಯಲ್ಲಿ ಅವನಿಗೆ ಘೋಷಣೆ ಮಾಡಲು ಯಾರೂ ಹೇಳಿಕೊಟ್ಟಿದ್ದು ಅಂತಾ ಮಾಹಿತಿ ಪಡೆಯಬೇಕು ಎಂದರು.

Read All News