ಶಿವಾಲಯದಲ್ಲಿ ಶರಣೆ ಡಾ. ಗುರುದೇವಿ ಹುಲ್ಲೇಪ್ಪನವರ್ ಅವರಿಂದ ಪ್ರವಚನ ಕಾರ್ಯಕ್ರಮ

  • Prasad K
  • 16 Aug 2024 , 12:47 PM
  • Belagavi
  • 509

ಬೆಳಗಾವಿ: ಶ್ರೀನಗರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ರವಿವಾರ  (18/08/2024) ಸಂಜೆ 7.00 ಗಂಟೆಗೆ ಶಿವಾಲಯದ ಆವರಣದಲ್ಲಿರುವ ಶ್ರೀ ಶಿವಾಂಜನೇಯ ಸಾಂಸ್ಕೃತಿಕ ಭವನದಲ್ಲಿ ಶರಣೆ ಡಾ. ಗುರುದೇವಿ ಹುಲ್ಲೇಪ್ಪನವರ್ ಅವರಿಂದ ಪ್ರವಚನ ಕಾರ್ಯಕ್ರಮವು ಜರುಗಲಿದೆ. ಇದೇ ರೀತಿ ಶ್ರಾವಣದ ಪ್ರತಿ ರವಿವಾರ ಜರುಗಲಿದೆ.

ಈ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಶ್ರೀ ಶಿವಾಂಜನೇಯ ಸೇವಾ ಅಭಿವೃದ್ಧಿ ಸಂಘವು ಆಯೋಜಿಸಿದ್ದು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಘದ ಪರವಾಗಿ ವಿನಂತಿಸಲಾಗಿದೆ. 

ಸಂಜೆ 7.00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಮಾರಂಭಕ್ಕೆ ಎಲ್ಲರೂ ಸಮಯಕ್ಕೆ ಸರಿಯಾಗಿ ಆಗಮಿಸುವಂತೆ ವಿನಂತಿಸಲಾಗಿದೆ.

Read All News