ಹಲ್ಯಾಳ ಗ್ರಾಮಕ್ಕೆ ಪದವಿಪೂರ್ವ ಕಾಲೇಜು: ಶಿಕ್ಷಣಾಧಿಕಾರಿಗೆ ಗ್ರಾಪಂ ಅಧ್ಯಕ್ಷ ಮುದಕಣ್ಣ ಶೇಗುಣಶಿ ಮನವಿ

  • 15 Jan 2024 , 3:44 AM
  • Belagavi
  • 563

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದ್ದು, ತಮ್ಮ ಗ್ರಾಮಕ್ಕೆ ಪದವಿಪೂರ್ವ ಕಾಲೇಜು ಮಂಜೂರು ಮಾಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮುದುಕಣ್ಣ ಶೇಗುಣಶಿ  ಅವರು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕಾಧ್ಯಕ್ಷ ಮಾದೇವ ಮಡಿವಾಳ ಮಾತನಾಡಿ, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಪಟ್ಟಣಗಳಿಗೆ ಕಾಲೇಜುಗಳಿಗೆ ಹೋಗುತ್ತಾರೆ.  ಅವರ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗುತ್ತಿದೆ. ಆದಷ್ಟು ಬೇಗ  ಜನಪ್ರತಿನಿಧಿಗಳು ಈ ಸಮಸ್ಯೆಯ ಕುರಿತು ಪರಿಶೀಲಿಸಿ ಶೀಘ್ರವಾಗಿ ಹಲ್ಯಾಳ ಗ್ರಾಮಕ್ಕೆ  ನೀಡಬೇಕೆಂದು ಆಗ್ರಹಿಸಿದರು.


ಇದೆ ವೇಳೆಯಲ್ಲಿ  ಎಸ್ ಡಿ ಎಂ ಸಿ  ಅಧ್ಯಕ್ಷ ದೀಪಕ್ ಮುರಗುಂಡಿ ಸಂತೋಷ್ ಕಾಂಬಳೆ, ರಾಹುಲ್ ಮಾದರ್,  ಹನುಮಂತ ನಾಯಿಕ,
ಶಾಲಾ ಮುಖ್ಯೋಪಾಧ್ಯರಾದ ಮಂಜುನಾಥ್ ಹತ್ತಿ, ಸಹಶಿಕ್ಷಕರು ಉಪಸ್ಥಿತರಿದ್ದರು.

Read All News