
ಹೆದ್ದಾರಿ ತಡೆದು ಬೃಹತ್ ಹೋರಾಟ-ಶಾಸಕ ರಾಜು ಕಾಗೆ ವಿರುದ್ಧ ಬಿದಿಗಿಳಿದ ರೈತರು
ಅಥಣಿ:ಬಸವೇಶ್ವರ ಏತ ನೀರಾವರಿ ವಿಚಾರವಾಗಿ ಅಥಣಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಹೋರಾಟ ಮಾಡಲಾಯಿತು. ರಾಜ್ಯಾ ಸರ್ಕಾರದ ವಿಳಂಬ ಧೋರಣೆಗೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ವ್ಯಾಪ್ತಿಯ 23 ಹಳ್ಳಿಗಳಿಗೆ ನೀರು ಪೂರೈಸುವ ಸುಮಾರು 1376 ಕೋಟಿ ರೂ ವೆಚ್ಚದಲ್ಲಿ ಕಳೆದ ಎಂಟು ವರ್ಷಗಳಿಂದ ಕುಂಟುತ್ತ ಸಾಗಿರುವ ಬಸವೇಶ್ವರ ಏತ ನೀರಾವರಿ ಯೋಜನೆ ವಿಳಂಬದ ಹಿಂದೆ ಕೆಲ ರಾಜಕೀಯ ಕಾಣದ ಕೈಗಳೇ ಕಾರಣವಾಗಿವೆ ಜನನಾಯಕರು ರಾಜಕೀಯ ಹಿತಾಸಕ್ತಿ ಬಿಟ್ಟು ರೈತರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಮೆರವಣಿಗೆ ಮಾಡುವ ಮೂಲಕ ಸರ್ಕಾರಕ್ಕೆ ಬೀಸಿ ಮುಟ್ಟಿಸಲಾಯಿತು. ನಂತರ ಶಿವಯೋಗಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆ ಹಿಡಿದು ಶಾಸಕ ರಾಜು ಕಾಗೆ ವಿರುದ್ಧ ಆಕ್ರೋಶ ಹೊರ ಹಾಕಿದರು.