ಭರತೇಶ ಶಿಕ್ಷಣ ಸಂಸ್ಥೆಯ ನೂತನ ಇಂಜಿನಿಯರಿಂಗ್ ಕಾಲೇಜು ಪ್ರಾರಂಭ

ಬೆಳಗಾವಿ:ಉತ್ತರ ಕರ್ನಾಟಕದ ಪ್ರಸಿದ್ಧ ಭರತೇಶ ಶಿಕ್ಷಣ ಸಂಸ್ಥೆ ಇಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಹೊಸ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುತ್ತಿದೆ.

promotions

1962 ರಲ್ಲಿ ಭರತೇಶ ಎಜ್ಯುಕೇಶನ್ ಟ್ರಸ್ಟ್ ಸ್ಥಾಪನೆಯಾದ ನಂತರದಿಂದ ಬೆಳಗಾವಿ, ಹಲಗಾ ಮತ್ತು ಬಸವನ ಕುಡಚಿಯ ಮೂವರು ಸುಸಜ್ಜಿತ ಕ್ಯಾಂಪಸ್‌ಗಳಲ್ಲಿ 20 ಶಿಕ್ಷಣ ಸಂಸ್ಥೆಗಳನ್ನು ನಡೆಸಿ, ಶ್ರೇಷ್ಠತೆಯನ್ನು ಸಾಧಿಸುತ್ತಿದೆ.

promotions

ಭರತೇಶ ಶಿಕ್ಷಣ ಸಂಸ್ಥೆಯು ಕಳೆದ 40 ವರ್ಷಗಳಿಂದ ಮೋತಿಚಂದ ಲಿಂಗಡೆ ಭರತೇಶ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಮೂಲಕ ಇಂಜಿನಿಯರಿಂಗ್ ಶಿಕ್ಷಣದಲ್ಲಿ ತೊಡಗಿಸಿಕೊಂಡಿದೆ.

promotions

ಇದೀಗ, ಭರತೇಶ ಸಂಸ್ಥೆ ಬಸವನ ಕುಡಚಿಯಲ್ಲಿ ಭರತೇಶ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬ ಹೊಸ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದೆ. ಈ ಕಾಲೇಜಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) ಅನುಮೋದನೆ ದೊರೆತಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದೊಂದಿಗೆ ಸಂಯೋಜಿತವಾಗಿದೆ. 


 ಈ ಹೊಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕು ಶಾಖೆಗಳು ಇರುತ್ತವೆ:
1. ಕಂಪ್ಯೂಟರ್ ಸೈನ್ಸ್ - 120 ಸೀಟುಗಳು

2.Artificial Intelligence and Machine Learning - 60 ಸೀಟುಗಳು

3. ಮಾಹಿತಿ ವಿಜ್ಞಾನ - 60 ಸೀಟುಗಳು

4. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ - 120 ಸೀಟುಗಳು ಒಟ್ಟು 360 ಸೀಟುಗಳೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ವೃತ್ತಿ ಆಯ್ಕೆಗಳು ಲಭ್ಯವಾಗುವಂತೆಯೇ ಈ ಹೊಸ ಕಾಲೇಜು, 30000 ಚದರ ಅಡಿಗಳಷ್ಟು ವಿಸ್ತಾರವಾದ ಬಸವನ ಕುಡಚಿಯ ಭರತೇಶ ಚಂದ್ರಗಿರಿ ಕ್ಯಾಂಪಸ್‌ನಲ್ಲಿ, ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಕಟ್ಟಡದಲ್ಲಿ ಪ್ರಾರಂಭಗೊಂಡಿದೆ.

ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿಗೃಹಗಳು, ನಿರಂತರ ಸಾರಿಗೆ ಸೌಲಭ್ಯಗಳು ಈ ಕ್ಯಾಂಪಸ್‌ನ ವೈಶಿಷ್ಟ್ಯಗಳಾಗಿವೆ. ಅರ್ಹ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಶುಲ್ಕದಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ನೀಡಲಾಗುತ್ತಿದೆ.

ಮ್ಯಾನೇಜ್‌ಮೆಂಟ್ ಸೀಟುಗಳ ಪ್ರವೇಶಾತಿ ಭರದಿಂದ ಸಾಗುತ್ತಿದೆ. ಅದೇ ರೀತಿ, ಭರತೇಶ ಇಂಜಿನಿಯರಿಂಗ್ ಕಾಲೇಜು ಹಲವು ಕೈಗಾರಿಕೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಕೈಗಾರಿಕಾ ಭೇಟಿಗಳು, ಪ್ರಾಜೆಕ್ಟ್ ಆಧಾರಿತ ಕಲಿಕೆ ಮತ್ತು ಕೌಶಲ್ಯ ಪ್ರಯೋಗಾಲಯಗಳನ್ನು ಹೊಂದಿಸಿದೆ.

ಹೆಚ್ಚಿನ ಮಾಹಿತಿಗಾಗಿ 9071015777ನಂಬರ್‌ನಲ್ಲಿ ಸಂಪರ್ಕಿಸಬಹುದಾಗಿದೆ.

Read More Articles