
ಸಾರೆ ಜಹಾಸೇ ಅಚ್ಚಾ ಹಿಂದುಸ್ತಾನ್ ಹಮಾರಾ
- shivaraj bandigi
- 29 Jun 2024 , 6:32 PM
- Bailhongal
- 8378
ಬೈಲಹೊಂಗಲ : ಭಾರತೀಯರು ಹೆಮ್ಮೆ ಪಡುವ ದಿನ 13 ವರ್ಷಗಳ ನಂತರ ಭಾರತೀಯ ಕ್ರಿಕೇಟ್ ಆಟಗಾರರು ಕಿರು ಪಂದ್ಯಾವಳಿಯ ವಿಶ್ವಕಪ್ ಗೆದ್ದು ಬೀಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತೀಯ ಆಟಗಾರರು 7 ರನ್ ಗಳ ಅಂತರದಿಂದ ಪಂದ್ಯವನ್ನು ಗೆದ್ದು ಸಮಸ್ತ ಭಾರತೀಯ ಕ್ರೀಡಾಭಿಮಾನಿಗಳಿಗೆ ಸಮರ್ಪಿಸಿದ್ದಾರೆ.

50-50 ಓವರಗಳ ವಿಶ್ವಕಪ್ ಪಂದ್ಯಾವಳಿಯ ಅವಧಿಯಲ್ಲಿ ಎಲ್ಲ ಹಂತದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋತು ವಿಶ್ವಕಪ್ ಕನಸು ಹಾಗೇ ಉಳಿದಿತ್ತು. ಈಗ ಪ್ರಸ್ತುತ ನಡೆದ ಕಿರು 20-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆರಂಭಿಕ ಹಂತದಿಂದಲೂ ಯಾವುದೇ ಪಂದ್ಯ ಸೋಲದೆ ಸತತ ಗೆಲುವು ಸಾಧಿಸಿ ಈಗ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡಿದೆ.

ವರದಿ : ರವಿಕಿರಣ್ ಯಾತಗೇರಿ