ಶಿಕ್ಷಕರು ಸಮಾಜದ ನಿರ್ಮಾಣ ಕರ್ತರು

ಬೈಲಹೊಂಗಲ : ಸಮಾಜದ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದದ್ದು, ಭವಿಷ್ಯದ ರೂಪುರೇಷೆ ಹಾಕಿ ಕೊಡುವಲ್ಲಿ ಅವರ ನಿಸ್ವಾರ್ಥ ಸೇವೆ ಅನೋನ್ಯವಾಗಿದೆ..

promotions

ಬೇಧಭಾವವ ಮರೆತು ಸಕಲರಿಗೂ ಸಮಾನವಾದ ಶಿಕ್ಷಣ ಧಾರೆಯೆರುವ ಪದ್ದತಿ ಶಿಕ್ಷಕರಲ್ಲಿ ಮಾತ್ರ ಕಾಣಸಿಗುತ್ತದೆ. 136 ವರ್ಷಗಳ ಹಿಂದೆ ಡಾ. ಎಸ್.ರಾಧಾಕೃಷ್ಣನ್ ಅವರು ಹಾಕಿಕೊಟ್ಟ ಅಡಿಪಾಯದಡಿಯಲ್ಲಿ ಶಿಕ್ಷಣ ಪದ್ದತಿಯು ಸಾಕಷ್ಟು ಸುಧಾರಣೆಯ ಕಂಡು ವರ್ಷದಿಂದ ವರ್ಷಕ್ಕೆ ಬದಲಾವಣೆಯಾಗುತ್ತಿದೆ.

promotions

ನಮ್ಮನ್ನಾಳುವ ಸರ್ಕಾರಗಳು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಸುಶಿಕ್ಷಿತ ವ್ಯಕ್ತಿಯನ್ನು ಶಿಕ್ಷಣ ಸಚಿವನಾಗಿ ಆಯ್ಕೆ ಮಾಡಿದಲ್ಲಿ ಮಾತ್ರ ಶೈಕ್ಷಣಿಕ ಕ್ಷೇತ್ರ ಮಹತ್ತರ ಬದಲಾವಣೆ ಕಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳ ನಿರ್ಮಾಣಕ್ಕೆ ಸಹಕಾರಿಯಾಗುವದು.

ವರದಿ : ರವಿಕಿರಣ್  ಯಾತಗೇರಿ

Read More Articles