ಕ್ರಿಕೆಟ್ ಲೋಕದ ಸವ್ಯಸಾಚಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್
ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ ಭಾರತದ ಮಾಜಿ ಅಂತಾರಾಷ್ಟ್ರೀಯ ದಿಗ್ಗಜ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ರವರ ಕುರಿತು ಸಂಕ್ಷಿಪ್ತ ವಿವರವನ್ನು ಇಲ್ಲಿ ತಿಳಿಸಲಾಗಿದಭಿಮಾನಿಗಳ ಪಾಲಿನ ದೇವರು, ಕ್ರಿಕೆಟ್ ಲೋಕದ ಸವ್ಯಸಾಚಿ.
ಹನ್ನೊಂದರ ವಯಸ್ಸಿನಲ್ಲಿಯೇ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಂಡು ಆಡಲು ಪ್ರಾರಂಭಿಸಿ ಹದಿನಾರನೇ ವಯಸ್ಸಿನಲ್ಲಿ ಅಂದರೆ 1989ನೇ ನವೆಂಬರ್ 15 ರಂದು ಪಾಕಿಸ್ತಾನದ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಆಡಿದ ಸಚಿನ್ ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ನೂರು ಶತಕಗಳನ್ನು ದಾಖಲಿಸಿದ ಏಕಮಾತ್ರ ಕ್ರಿಕೆಟ್ ಆಟಗಾರ, ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಪ್ರಥಮ ದಾಂಡಿಗ, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ನುಗಳನ್ನು ದಾಖಲಿಸಿದ ಆಟಗಾರ, ಮೊದಲಾದವು ಇವರ ಅಪಾರ ದಾಖಲೆಗಳಲ್ಲಿ ಪ್ರಮುಖವಾದವು.
ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿರುವವರು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 30,000 ಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ. ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದವರು.
ಸಾರ್ವಕಾಲಿಕ ವಿಶ್ವದ ಅತ್ಯಂತ ಸಮೃದ್ಧ ಬ್ಯಾಟ್ಸ್ ಮನ್ ಎಂದು ಪರಿಗಣಿಸಲಾಗಿದೆ. 2010 ರಲ್ಲಿ ಟೈಮ್ ನಿಯತಕಾಲಿಕವು ಸಚಿನ್ ಅವರನ್ನು ತನ್ನ ವಾರ್ಷಿಕ ಟೈಮ್ 100 ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ಜನರಲ್ಲಿ ಒಬ್ಬರನ್ನಾಗಿ ಸೇರಿಸಿತು.
ಡಿಸೆಂಬರ್ 2012 ರಲ್ಲಿ ಸಚಿನ್ ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು, ತರುವಾಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 200 ನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ 16 ನವೆಂಬರ್ 2013 ರಂದು ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತರಾದರು. ಸಚಿನ್ ಒಟ್ಟು 664 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 34,357 ರನ್ ಗಳಿಸಿದ್ದ ಕ್ರಿಕೆಟ್ ದೇವರು.