ಜನವರಿ 1ರಿಂದ ಶಾಲಾ ಕಾಲೇಜು ಆರಂಭ; ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು: ಮಹಾಮಾರಿ ಕೊರೋನಾ ಹಾವಳಿಯಿಂದ ಕಳೆದ ಸುಮಾರು 8 ತಿಂಗಳಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ರಾಜ್ಯ ಸರ್ಕಾರ ಜನವರಿ 1 ರಿಂದ ಶಾಲಾ, ಕಾಲೇಜು ಆರಂಭದ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಂಡಿದ್ದು ಅದರಲ್ಲಿ ಯಾವದೇ ಬದಲಾವಣೆ ಇಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆಪಡಿಸಿದ್ದಾರೆ.
ಈಗಾಗಲೇ ಹೇಳಿಕೆ ನೀಡಿರುವ ಅವರು ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಆದರೆ ಶಾಲಾ, ಕಾಲೇಜು ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಶಾಲಾ ಕಾಲೇಜು ಆರಂಭದ ನಿಯಮಾವಳಿಗಳು ಕೆಳಗಿನಂತಿವೆ
ಹಾಗೂ ಈ ಶೈಕ್ಷಣಿಕ ವರ್ಷ ಕಡಿತಗೊಳಿಸಿರುವ ಹಿನ್ನಲೆ 10 ನೇ ತರಗತಿ ಪಠ್ಯಕ್ರಮ ಕಡಿತಗೊಳಿಸಿದ್ದು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಜ.6 ರಂದು ಘೋಷಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.