Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಆರಂಭಿಕ ಆಘಾತ ಅನುಭವಿಸಿದ ಭಾರತ

localview news

ಮೆಲ್ಬರ್ನ್: ಶನಿವಾರದಿಂದ ಆರಂಭವಾಗಿರುವ ಆಸ್ಟ್ರೇಲಿಯಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತ ತಂಡ ಆರಂಭಿಕ ಆಘಾತ ಎದುರಿಸಿತು. ಭಾರತದ ಪರ ಇನ್ನಿಂಗ್ಸ್‌ ಆರಂಭಿಸಿದ ಮಯಂಕ್ ಅಗರವಾಲ್ ರನ್ನು ರನ್‌ ಖಾತೆ ತೆರೆಯುವ ಮುನ್ನ ಮಿಚೆಲ್ ಸ್ಟಾರ್ಕ್ ಪೆವಿಲಿಯನ್‌ ಹಾದಿ ತೊರಿಸಿದರು.

ಬಳಿಕ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಔಟಾಗದೆ (07), ಶುಭಮನ್ ಗಿಲ್ ಔಟಾಗದೆ (28) ರನ್‌ ಗಳಿಸಿದರು.ಮೊದಲ ದಿನದಾಟ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿದೆ.

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 72.3 ಓವರ್‌ಗಳಲ್ಲಿ 195 ರನ್‌ ಗಳಿಸಿ ಆಲೌಟ್‌ ಆಯಿತು. ಆಸೀಸ್‌ ಪರ ಮ್ಯಾಥ್ಯೂ ವೇಡ್ 30, ಮಾರ್ನಸ್ ಲಾಬು ಷೇನ್ 48, ಟ್ರಾವಿಸ್ ಹೆಡ್ 38 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ಭಾರತದ ಪರ ಜಸ್‌ಪ್ರೀತ್‌ ಬೂಮ್ರಾ 4, ಆರ್‌.ಅಶ್ವಿನ್‌ 3, ಮೊಹಮ್ಮದ್ ಸಿರಾಜ್ 2, ರವೀಂದ್ರ ಜಡೇಜ 1 ವಿಕೆಟ್‌ ಪಡೆದರು.