Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದುಳೆಬ್ಬಿಸುತ್ತಿದೆ ರಾಕೀ ಭಾಯ್ ಕೆಜಿಎಫ್ 2 ಟೀಸರ್

localview news

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF Chapter 2 ಚಿತ್ರದ ಟೀಸರ್ ಧಮಾಲ್ ಸೃಷ್ಟಿಸಿದೆ. ಕೆಜಿಎಫ್ 2 ಟೀಸರ್ ವೀಕ್ಷಣೆಯ ಸಂಖ್ಯೆ 16 ಮಿಲಿಯನ್ ದಾಪುಗಾಲಿರಿಸಿದ್ದು, ಈ ಹಿಂದೆ ಬಾಹುಬಲಿ-2 ಚಿತ್ರದ ಟ್ರೈಲರ್ ನಿರ್ಮಿಸಿದ್ದ ದಾಖಲೆಯನ್ನು ಕೆಜಿಎಫ್ 2 ಟೀಸರ್ ಹಿಂದಿಕ್ಕಿದೆ.

ಚಿತ್ರ ನಿರ್ಮಾಪಕರು ಯಶ್ ಅವರ ಹುಟ್ಟುಹಬ್ಬ ಅಂದರೆ ಜನವರಿ 8 ರಂದು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಕಾತರ ಇಮ್ಮಡಿಗೊಳಿಸಿತ್ತು. ಈ ಮೊದಲೇ ಈ ಚಿತ್ರದ ಕುರಿತು ಈಗ ಎಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಬಿಡುಗಡೆಯಾಗಿ 4 ದಿನಗಳೇ ಕಳೆದರೂ ಯೂಟ್ಯೂಬ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್ ಹವಾ ಮಾತ್ರ ಇನ್ನೂ ಕಡಿಮೆಯಾದಂತಿಲ್ಲ.