ಆಸೀಸ್ ಗೆ ಮಣ್ಣು ಮುಕ್ಕಿಸಿದ ಭಾರತ
ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಮೂರು ವಿಕೆಟ್ಗಳಿಂದ ಗೆಲ್ಲುವ ಮೂಲಕ ಟೆಸ್ಟ್ ಸರಣಿಯನ್ನು2-1ರಿಂದ ಗೆದ್ದು ಅಭೂತಪೂರ್ವ ಸಾಧನೆ ಮಾಡಿದೆ.
ಪ್ರಮುಖ ಆಟಗಾರರ ಗೈರಿನಲ್ಲಿ ಭಾರತ ತಂಡವು ಇಂತಹ ವಿಶೇಷ ಸಾಧನೆ ಮಾಡಿರುವುದು. ಅದೂ ಆಸ್ಟ್ರೇಲಿಯನ್ನರನ್ನು ಆಸೀಸ್ ನೆಲದಲ್ಲೇ ಸೋಲಿಸಿರುವುದು ಈ ಸಾಧನೆಯ ಮಹತ್ವವನ್ನು ಹೆಚ್ಚಿಸಿದೆ.
ಪಂದ್ಯದ ಕೊನೆಯ ದಿನ ಗೆಲ್ಲಲು 328 ರನ್ಗಳಿಸಬೇಕಾದ ಗುರಿ ಪಡೆದ ಭಾರತವು ರಿಶಬ್ ಪಂತ್ ಅವರ ಅಜೇಯ 89 ರನ್, ಶುಭಮನ್ ಗಿಲ್ ಅವರ 91 ರನ್ ಹಾಗೂ ಇನ್ನಿತರ ಆಟಗಾರರ ಉಪಯುಕ್ತ ಕೊಡುಗೆಯ ನೆರವಿನಿಂದ ರೋಮಾಂಚಕ ಜಯ ಗಳಿಸಿತು.
ಈ ಜಯದೊಂದಿಗೆ ಭಾರತವು ಗಾವಸ್ಕರ್ -ಬೋರ್ಡರ್ ಟ್ರೋಫಿಯನ್ನು ತನ್ನಲ್ಲೆ ಉಳಿಸಿಕೊಂಡಿದೆ.