Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯುವಿ ಮೇಲೆ ಎಫ್ಐಆರ್ !

localview news

  ಚಂಡೀಗಢ:   ಚಂಡೀಗಢ ಭಾರತ ತಂಡದ ಮಾಜಿ ಕ್ರಿಕೆಟಿಗ, ಚುಟುಕು ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ದ ಒಂದೇ ಓವರ್ ನಲ್ಲಿ ಆರ ಸಿಕ್ಸರ್ ಸಿಡಿಸಿದ್ದ ಯುವರಾಜ್ ಸಿಂಗ್ ವಿರುದ್ಧ ಹರ್ಯಾಣ ಪೊಲೀಸರು ಲಾಕ್ ಡೌನ್ ಸಮಯದಲ್ಲಿ ಜಾತಿನಿಂದನೆ ಮಾಡಿದ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ.

ದಲಿತ ಸಮಾಜದ ವಿರುದ್ಧ ಯುವರಾಜ್ ನಿಂದನಾತ್ಮಕ ಶಬ್ದ ಬಳಕೆ ಮಾಡಿದ್ದಾರೆಂದು ಎಂಟು ತಿಂಗಳ ಹಿಂದೆ ದೂರು ನೀಡ ಲಾಗಿತ್ತು. ಪೊಲೀಸರು ಯುವಿ ವಿರುದ್ಧ ಐಪಿಸಿ ಮತ್ತು ಎಸ್ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

2020ರ ಜೂನ್ ನಲ್ಲಿ ಕ್ರಿಕೆಟಿಗ ರೋಹಿತ್ ಶರ್ಮಾ ಜತೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡುವ ವೇಳೆ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಲಾಗಿದೆ.