ಇಂಗ್ಲೆoಡ್ ವಿರುದ್ದ ಭಾರತಕ್ಕೆ ಸರಣಿ ಜಯ: ವಿಶ್ವಕಪ್ ಪೈನಲ್ಗೆ ಲಗ್ಗೆ ಇಟ್ಟ ಭಾರತ
ಅಹಮದಾಬಾದ್: ಭಾರತ ಬೀಸಿದ ತಿರುವು ಬಲೆಯಿಂದ ಹೊರಬರಲಾಗದೇ ಒದ್ದಾಡಿದ ಇಂಗ್ಲೆoಡ್ ತಂಡವು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲು ಕಂಡಿದೆ.
ನಾಲ್ಕು ಪಂದ್ಯಗಳ ಸರಣಿಯನ್ನು 3-1ರಲ್ಲಿ ವಶಪಡಿಸಿಕೊಂಡ ಭಾರತ ಇಂಗ್ಲೆoಡಿನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲು ಹಕ್ಕು ಪಡೆದುಕೊಂಡಿದೆ.
ಇನಿoಗ್ಸ್ ಸೋಲು ತಪ್ಪಿಸಿಕೊಳ್ಳಲು 161 ರನ್ ಮಾಡಿಬೇಕಿದ್ದ ಇಂಗ್ಲೆoಡ್ ತಂಡವು ನಾಲ್ಕನೇ ಟೆಸ್ಟಿನ ಮೂರನೇ ದಿನ ಕೇವಲ 135 ರನ್ನುಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂದು ಸತತ ಮೂರನೇ ಸೋಲು ಅನುಭವಿಸಿತು.