ಹ್ಯಾಟ್ರಿಕನೊಂದಿಗೆ ಇತಿಹಾಸ ರಚಿಸಿದ ಆರ್ ಸಿ ಬಿ
ಚೆನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 38 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ ಇವತ್ತು ನಡೆದ ಆರ್ ಸಿ ಬಿ ಹಾಗೂ ಕೇಕ್ಆರ್ ರೋಚಕ ಪಂದ್ಯದಲ್ಲಿ ಆರ ಸಿ ಬಿ ಜಯ್ ಗಳಿಸಿ ಐ ಪಿ ಎಲ ಇತಿಹಾಸದಲ್ಲಿ ಹ್ಯಾಟ್ರಿಕ್ ಜಯ್ ಗಳಿಸಿದ ಮೊದಲ ತಂಡವಾಗಿದೆ.
ಪ್ರಸಕ್ತ ಐಪಿಎಲ್ನಲ್ಲಿ ಅಸಾಧಾರಣ ಪ್ರದರ್ಶನ ನೀಡಿ ಮೂರು ಪಂದ್ಯಗಳಲ್ಲಿ ಸತತ ಹ್ಯಾಟ್ರಿಕ್ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಹ್ಯಾಟ್ರಿಕ್ ಜಯ್ ಗಳಿಸಿದೆ. ಚೆನ್ನೈನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಆರ್ ಸಿಬಿ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಪೇರಿಸಿತ್ತು.
ಆರ್ಸಿಬಿ ನೀಡಿದ 205 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಪೇರಿಸಿ 39 ರನ್ ಗಳಿಂದ ಆರ್ಸಿಬಿಗೆ ಶರಣಾಗಿದೆ. ಆರ್ಸಿಬಿ ಪರ ಮ್ಯಾಕ್ಸ್ವೆಲ್ 49 ಎಸೆತಗಳಲ್ಲಿ 78 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ನಂತರ ಎಬಿ ಡಿವಲಿಯರ್ಸ್ ತಮ್ಮ ರನ್ಗಳಿಕೆಯ ವೇಗವನ್ನು ಮತ್ತಷ್ಟು ವೃದ್ಧಿಸಿಕೊಂಡರು.
ಕೊನೆಯವರೆಗೂ ಅಜೇಯವಾಗುಳಿದ ಎಬಿ ಡಿವಿಲಿಯರ್ಸ್ 76 ರನ್ಗಳಿಸಿದರು. ಈ ಸಾಹಸದಿಂದ ಆರ್ಸಿಬಿ 204 ರನ್ಗಳನ್ನು ಗಳಿಸಿತು. ಇ ಇಬ್ಬರ ಸ್ಪೋಟಕ ಬ್ಯಾಟಿಂಗ ನಿಂದ ಹಾಗೂ ಆರ್ಸಿಬಿ ಎಳ ಅಡಿ ಕಟ್ಟಡ ಜಮಿಸನ್ ಬಾಲಿಂಗ್ ನಿಂದ ರೋಚಕ ಗೆಲುವು ಸಾಧಿಸಿತು.