Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯುವ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ: ಈ ಸುದ್ದಿ ನೋಡಿ

localview news

ಬೆಳಗಾವಿ :ದಶಕಗಳಿಂದಲೂ ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕುಂದಾ ನಗರಿ ಬೆಳಗಾವಿಗೆ ತನ್ನದೇ ಆದ ವಿಶೇಷ ಇತಿಹಾಸವಿದೆ.

ಇಲ್ಲಿನ ಹಲವಾರು ಸಾಹಿತಿಗಳು, ಕವಿಗಳು ಬರಹಗಾರರು ಕನ್ನಡ,ಮರಾಠಿ ಹಾಗು ಆಂಗ್ಲ ಭಾಷೆಯಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ.ಇಂದಿನ ಯುವ ಜನತೆಯು ಬೆಳಗಾವಿಯ ಸಾಹಿತ್ಯದ ಈ ಬಳುವಳಿಯನ್ನು ಮುಂದುವರೆಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ.

ಹಾಗೆಯೇ ಬೆಳಗಾವಿಯ ಜನರು ಸಾಹಿತ್ಯ ಲೋಕಕ್ಕೆ ನೀಡುವ ಪ್ರೋತ್ಸಾಹ ನಿಜಕ್ಕೂ ಶ್ಲಾಘನೀಯ್. ಇದು ಕಲೆಗಾಗಿ ಶ್ರಮಿಸಲು ನಮಗೆ ಇನ್ನಷ್ಟು ಸ್ಫೂರ್ತಿ ನೀಡುತ್ತದೆ. ಇವತ್ತು ನಾವು ಬರಹ ಲೋಕದಲ್ಲಿ ಹಳೆಯವರ ಅನುಭವ ಮತ್ತು ಹೊಸಬರ ಆಸಕ್ತಿಯನ್ನು ಜೊತೆಗೆ ಒಂದೇ ವೇದಿಕೆಯ ಮೇಲೆ ತರುವ ಪ್ರಯತ್ನ ನಡೆಸಿದ್ದೇವೆ.

ಒಬ್ಬ ಬರಹಗಾರ, ಕವಿ ಮತ್ತು ಅಭಿನಯದಲ್ಲಿ ಆಸಕ್ತಿಯುಳ್ಳ ಅಭಿಷೇಕ್ ಬೆಂಡಿಗೇರಿಯವರು ಆರಂಭಿಸಿದ ರೋಸ್ಟ್ರಮ್ ಡೈರೀಸ್ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತರಲು ಕಾಯುತ್ತಿರುವ ಎಲ್ಲಾ ಬರಹಗಾರರಿಗೆ ಅವಕಾಶ ನೀಡುವ ವೇದಿಕೆ.

ನಂತರ ಮದುಮೇಹ -ಹೃದಯ್ ತಜ್ಞ ಜಲ್ ಅಭಿಯಾನದ ರೂವಾರಿ, ಪುಸ್ತಕ ಪ್ರೇಮಿ ಡಾ ಮಾಧವ್ ಪ್ರಭು ಹಾಗೂ ಪ್ರತಿಭಾವಂತ, ಕ್ರಿಯಾಶೀಲ ಸಾತ್ವಿ ಜೋಗ ಅವರು ವೇದಿಕೆಯ ಮಾರ್ಗದರ್ಶಿಗಳಾಗಿ ಕೈ ಗೂಡಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿರುವ ರೋಸ್ಟ್ರಮ್ ಡೈರೀಸ್ ಬೆಳಗಾವಿಯ ಸಾಹಿತ್ಯ ನಕಾಶೆಯಲ್ಲಿ ಹೊಸ ಉಲ್ಲೇಖಗಳನ್ನು ಮೂಡಿಸುವುದರೊಂದಿಗೆ ಇಲ್ಲಿನ ಜನರ ಆಸಕ್ತಿಯ ಕೇಂದ್ರ ಬಿಂದುವಾಗಿದೆ.

ರೋಸ್ಟ್ರಮ್ ಡೈರೀಸ್ ಕಾರ್ಯಕ್ರಮದ 13 ಸಂಚಿಕೆಗಳಲ್ಲಿ 1000 ಕ್ಕಿಂತಲೂ ಹೆಚ್ಚು ಕಲಾವಿದರು ಕವನ, ಕಥೆ, ಹಾಸ್ಯ ಹಾಗೂ ಸಂಗೀತ ವಿಭಾಗಗಳಲ್ಲಿ ತಮ್ಮ ಪ್ರದರ್ಶನ್ ನೀಡಿದ್ದಾರೆ.

ರೋಸ್ಟ್ರಮ್ ಡೈರೀಸ್ ಕಾರ್ಯಕ್ರಮಕ್ಕೆ ಸಿಕ್ಕ ಪ್ರತಿಕ್ರಿಯೆಕಂಡು ಇದನ್ನು ಇನ್ನಷ್ಟು ದೊಡ್ಡ್ ಪ್ರಮಾಣದಲ್ಲಿ ಆಯೋಜಿಸಬೇಕೆಂಬ ಆಸೆಯೂ ಬೆಳಗಾವಿಯ ಕಾವ್ಯ ಸಮ್ಮೇಳನವನ್ನು ಹುಟ್ಟು ಹಾಕಿತು.

ಮೊಟ್ಟ ಮೊದಲ ಬಾರಿಗೆ ಬೆಳಗಾವಿ ಕಾವ್ಯ ಸಮ್ಮೇಳನ ( ಬೆಳಗಾವಿ ಪೊಯೆಟ್ರಿ ಫೆಸ್ಟಿವಲ್) ದೊಡ್ಡ ಪ್ರಮಾಣದಲ್ಲಿ ಸಜ್ಜಾಗಿದೆ ಅಂತರಂಗದ ಅಲೆಗಳಿಗೆ ಪದಗಳ ಬಣ್ಣ ಹಚ್ಚುವ ಕಲೆ ನಿಮ್ಮಲ್ಲಿದಿಯೇ? ನಿಮ್ಮಲ್ಲಿ ಅಡಗಿರುವ ಭಾವನೆಗಳನ್ನು ಹೊರ ತನ್ನಿ ಜಗತ್ತಿನ ಮುಂದೆ ಇಡಿ.

*ಕನ್ನಡ,ಹಿಂದಿ,ಮರಾಠಿ, ಇಂಗ್ಲಿಷ್ ಒಟ್ಟು 4ಭಾಷೆ ಗಳಲ್ಲಿ ಕವನಗಳನ್ನು ಸ್ವೀಕರಿಸಲಾಗುವುದು.

* ಜಗತ್ತಿನ ಯಾವುದೇ ಮಲೆಯಿಂದಲೂ ಕವನಗಳನ್ನು ಕಳುಹಿಸಬಹು.

*50 ಪದಗಳ ಮಿತಿಯಿರುವ ಯಾವುದೇ ಶೈಲಿಯ ಕವಿತೆಗಳು ಮಾನ್ಯ ಯಾವುದೇ ವಯಸ್ಸಿನ ಗುಂಪಿನವರು ಕವನಗಳನ್ನು ಕಳುಹಿಸಬಹುದು.

*ಒಂದು ಕವನ ಸಲ್ಲಿಕೆ 100 ರೂ ರಿಜಿಸ್ಟ್ರೇಷನ್ ಫೀ (ಇ-ಟಿಫಿಕೇಟ್ ಸಹಿತ) ಬರಿಸಬೇಕು. ಅತ್ಯುತ್ತಮ 200 ಕವನಗಳನ್ನು ಬೆಳಗಾವಿ ಕವನ ಸಮ್ಮೇಳನದ 2021 ಕವನ ಸಂಕಲನದಲ್ಲಿ ಯಾವುದೇ ವೆಚ್ಚವಿಲ್ಲದೇ ಪ್ರಕಟಿಸಲಾಗುವುದು.

* ಸಲ್ಲಿಕೆಗೆ ಕೊನೆಯ ದಿನಾಂಕ : ಮೇ 16, 2021

ವಿಶೇಷವಾದ ಪ್ರಶಸ್ತಿ ಮತ್ತು ಬಹುಮಾನಗಳನ್ನು ಗೆಲ್ಲುವ ಅವಕಾಶ ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ದೊರೆಯಲಿದೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದ ನಂತರ ಅದನ್ನು ಎಲ್ಲಾ ಸ್ಪರ್ಧಾಳುಗಳಿಗೆ ಇ ಮೇಲ್ ಮಾಡಲಾಗುವುದು.

ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜೂನ್ 6, 2021 ರವಿವಾರದಂದು 4 ಗಂಟೆಗೆ ಹೋಟೆಲ್ ಈ ಫಾ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ

 ಕಾರ್ಯಕ್ರಮದಲ್ಲಿ ಕೂವಿಡ್‌ಗೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಲಾಗುವುದು. 

ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್ge ಭೇಟಿ ನೀಡಿ ಅಥವಾ 9986186781 ಸಂಪರ್ಕಿಸಿ: • ಕವಿತೆಗಳನ್ನು ಬೆಳಗಾವಿ ಪೊಯೆಟ್ರಿ ಫೆಸ್ಟಿವಲ್ಗೆಸಲ್ಲಿಸಲು www.beritanipoetrysicial.comಭೇಟಿ ನೀಡಬಹುದು.