ಲಾಠಿ ತೋರಿಸಿ ಜನರನ್ನು ಮನೆಗೆ ಕಳುಹಿಸಿದ ಪೊಲೀಸರು
ಬೆಳಗಾವಿ : ಕೋವಿಡ್-19 ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ನಗರದಲ್ಲಿ 14 ದಿನಗಳ ಕಾಲ ಜನತಾ ಕಫ್ರ್ಯೂ ಪರಿಣಾಮವಾಗಿ ಬುಧವಾರ ಗಣಪತಿಗಲ್ಲಿಯಲ್ಲಿ ಹೊರಗಡೆ ಬರುವ ಜನರಿಗೆ ಪೊಲೀಸ್ ಲಾಠಿ ತೋರಿಸಿ ವಾಪಾಸ್ ಕಳುಹಿಸಿದರು.
ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿತ್ತು. ವಿನಾಕಾರಣ ರಸ್ತೆಗೆ ಬರುತ್ತಿದ್ದ ಜನರಿಗೆ ಪೊಲೀಸರು ಲಾಠಿ ತೋರಿಸಿ ವಾಪಸ್ ಕಳೆಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಅಶೋಕ ವೃತ್ತದಲ್ಲಿ ಬೆಳಗ್ಗೆ 10 ಗಂಟೆಗೆ ಜನತಾ ಕಫ್ರ್ಯೂ ಪ್ರಾರಂಭವಾಗುತ್ತಿದ್ದಂತೆ ಪೊಲೀಸರಿಗೆ ವಾಹನ ಸಾಗಿ ಹಾಕುವುದು ದುಸ್ತರವಾಗಿತ್ತು.