ಪ್ಲೇಆಪ್ಸ್ ಪ್ರವೇಶಿಸುತ್ತಾ ಆರ್.ಸಿ.ಬಿ ? ಮಹತ್ವ ಪಡೆದುಕೊಂಡ ಇಂದಿನ ಆರ್.ಸಿ.ಬಿ vs ಪಂಜಾಬ್ ಪಂದ್ಯ
ಅಹ್ಮದಾಬಾದ್: ವಿರಾಟ್ ಕೊಹ್ಲಿ ನಾಯಕತ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲು ಸಜ್ಜಾಗುತ್ತಿದೆ. ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪ್ಲೇಆಫ್ಸ್ ಸನಿಹದಲ್ಲಿ ಆರ್.ಸಿ.ಬಿ ಇದ್ದರೆ ಕೆ.ಎಲ್ ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕೇವಲ ಎರಡು ಮಾತ್ರ ಗೆದ್ದಿದೆ. ಇಂದಿನ ಪಂದ್ಯ ಎರಡು ತಂಡಕ್ಕೂ ಮಹತ್ವದಾಗಿದ್ದು ಗೆಲುವಿನ ತುಡಿತದಲ್ಲಿವೆ. ಪಿಚ್ ರಿಪೋರ್ಟ್: ಅಹ್ಮದಾಬಾದ್ನಲ್ಲಿ ನಡೆಯುತ್ತಿರುವ ಈ ಪಂದ್ಯದ ಪಿಚ್ ಬ್ಯಾಟಿಂಗ್ಗೆ ಉತ್ತಮವಾಗಿದೆ. ಆದರೆ ನಿಧಾನಗತಿಯ ಬೌಲರ್ಗಳಿಗೆ ಇಲ್ಲಿನ ಪಿಚ್ ಸ್ವಲ್ಪ ನೆರವಾಗಬಹುದು.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ಆರ್ಸಿಬಿ: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ(ನಾಯಕ), ರಜತ್ ಪಾಟಿದರ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್(ವಿ.ಕೀ), ವಾಷಿಂಗ್ಟನ್ ಸುಂದರ್, ದೇನಿಯಲ್ ಸ್ಯಾಮ್ಸ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್.
ಪಿಬಿಕೆಎಸ್: ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲ್ಸ್ ಪೂರನ್, ಮೊಯ್ಸೆಸ್ ಹೆನ್ರಿಕ್ಸ್, ಶಾರೂಖ್ ಖಾನ್, ಕ್ರಿಸ್ ಜೋರ್ಡನ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್
ಪಂದ್ಯದ ವಿವರಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್
ದಿನಾಂಕ: ಏಪ್ರಿಕ್ 30, 2021
ಸಮಯ: ರಾತ್ರಿ 07:30ಕ್ಕೆ
ಸ್ಥಳ: ಮೊಟೇರಾ ಕ್ರೀಡಾಂಗಣ, ಅಹ್ಮದಾಬಾದ್.