ಸಕತ್ತ ವೈರಲ್ ಆಗ್ತಿದೆ ಪ್ರಾಣೇಶ ಹೇಳಿದ ಸಂದೇಶದ ವಿಡಿಯೋ
ಬೆಂಗಳೂರು: ಕೊರೋನಾ ಎರಡನೇ ಅಲೆಯ ಪರಿಣಾಮ ದೇಶದಲ್ಲಿ ಜೀವವಾಯು ಆಕ್ಸಿಜನ್ಗಾಗಿ ಪರದಾಟ ಶುರುವಾಗಿದೆ. ಕೋವಿಡ್ ಸೋಂಕಿನಿಂದ ನರಳುತ್ತಿರುವವರಿಗೆ ಆಮ್ಲಜನಕ ಪೂರೈಕೆ ಮಾಡಲು ಸರ್ಕಾರಗಳು, ಆಸ್ಪತ್ರೆಗಳು ಪರದಾಡುತ್ತಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಗಂಗಾವತಿ ಪ್ರಾಣೇಶ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ತ ಸದ್ದು ಮಾಡುತ್ತಿದೆ.
ಅಂದು ಪ್ರಾಣೇಶ್ ಅವರು ಹೇಳಿರುವ ಮಾತುಗಳು ಇಂದು ಪ್ರಸ್ತುತ ಎನ್ನಿಸುತ್ತಿವೆ. ನಿಜಕ್ಕೂ ಇಂದು ದೇಶದಲ್ಲಿ ಆಕ್ಸಿಜನ್ ಅಭಾವ ಎದುರಾಗಿದೆ. ದುಡ್ಡು ಕೊಟ್ಟರೂ ಆಮ್ಲಜನಕ ಸಿಗದಂತಾಗಿದೆ. ಪ್ರಾಣೇಶ್ ಅವರು ಐದು ವರ್ಷಗಳ ಹಿಂದೆ ಮಾತನಾಡಿರುವ ವಿಡಿಯೋ ಇದೀಗ ಮುನ್ನೆಲೆಗೆ ಬಂದಿದೆ. ಸೋಷಿಯಲ್ ಮೀಡಿಯಾ ತಾಣಗಳಾದ ಟ್ವಿಟರ್, ಇನ್ಸ್ಟಾಗ್ರಾಂ ಹಾಗೂ ವಾಟ್ಸಾಪ್ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಸಹಜ ಹಾಸ್ಯದ ಮೂಲಕ ನಮ್ಮನ್ನು ಎಚ್ಚರಿಸುತ್ತಿರುವ ಪ್ರಾಣೇಶ್ ಅವರ ಮುಂದಾಲೋಚನೆ ಹಾಗೂ ಸಾಮಾಜಿಕ ಕಳಕಳಿಗೆ ಎಲ್ಲರೂ ತಲೆ ಬಾಗುತ್ತಿದ್ದಾರೆ.