ಅನಗತ್ಯವಾಗಿ ಹೊರಗಡೆ ಬಂದವರ ವಾಹನ ಸೀಜ್ ಮಾಡಿದ ಪೊಲೀಸರು
ಬೆಳಗಾವಿ :ಕೊರೋನಾ ಎರಡನೇ ಅಲೆಯ ಭೀತಿಯಿಂದ ನಗರದಲ್ಲಿ ಮೂರನೇ ದಿನದ ಜನತಾ ಕರ್ಫ್ಯೂಗೆ ಬಾರಿ ಬೆಂಬಲ ಸಿಕ್ಕಿತ್ತು. ಅನಗತ್ಯವಾಗಿ ಹೊರಗಡೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳನ್ನು ಸೀಜ್ ಮಾಡಿದರು. ಬೆಳಗಾವಿಯಲ್ಲಿ ಎಲ್ಲ ಕಡೆ ಬೈಕ್ ಸೇರಿ ವಾಹನ ಸಂಚಾರ ಹೆಚ್ಚಿರುವುದರಿಂದ ಪೊಲೀಸರು ಖಡಕ್ ಸಂದೇಶ ರವಾನಿಸಲು ಸಜ್ಜಾಗಿದ್ದಾರೆ.
ಬೈಕ್ ಮೇಲೆ, ವಾಹನಗಳಲ್ಲಿ ಹೊರಟವರನ್ನು ವಿಚಾರಿಸುತ್ತಿರುವ ಪೊಲೀಸರು ಬಹುತೇಕ ಕಡೆ ಲಾಠಿ ಬೀಸಿ ಬೈಕ್ ಸವಾರರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಹಲವರು ಸವಾರರ ವಾಹನ ಸೀಜ್ ಮಾಡುತ್ತಿದ್ದಾರೆ. ಆದರೆ ಕಾರ್ಮಿಕರನ್ನೂ ಕೆಲಸಕ್ಕೆ ಬಿಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಬೆಳಗಾವಿ ಪೊಲೀಸರು ಅನಗತ್ಯವಾಗಿ ಓಡಾಡುವವರನ್ನು ತಡೆಯಲು ಶುಕ್ರವಾರ ಮತ್ತೊಮ್ಮೆ ಖಡಕ್ ಕಾರ್ಯಾಚರಣೆಗೆ ಇಳಿದಿದ್ದಾರೆ. ಹೆಲ್ಮೆಟ್ ಇಲ್ಲದವರು, ತ್ರಿಬಲ್ ಸವಾರಿ ಹೊರಟವರು, ಸುಮ್ಮಸುಮ್ಮನೆ ಸಂಚರಿಸುವವರನ್ನು ವಿಚಾರಿಸುತ್ತಿರುವ ಪೊಲೀಸರು ಬಹುತೇಕ ಕಡೆ ಲಾಠಿ ಬೀಸಿ ಬೈಕ್ ಸವಾರರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಹಲವು ಸವಾರರ ವಾಹನ ಸೀಜ್ ಮಾಡುತ್ತಿದ್ದಾರೆ.