Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಸಗೊಬ್ಬರ ಬೆಲೆ ಇಳಿಕೆ ಮಾಡುವಂತೆ ರೈತರ ಒತ್ತಾಯ

localview news

ಕಿತ್ತೂರು: ರಸಗೊಬ್ಬರಗಳ ಮೇಲೆ ಹಚ್ಚಿಸಿರುವ ಬೆಲೆಯನ್ನು ಕೂಡಲೇ ವಾಪಸ್ ಪಡೆಯಬೇಕು ಹಾಗೂ ಈ ಸಮಯದಲ್ಲಿ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ನೇಗಿಲಯೋಗಿ ರೈತ ಸೇವಾ ಸಂಘದ ವತಿಯಿಂದ ಕಿತ್ತೂರು ತಹಶೀಲ್ದಾರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಪ್ರತಿ ವರ್ಷ ಕೃಷಿ ಉತ್ಪಾದನ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಆದರೆ ರೈತರು ಬೆಳದ ಕೃಷಿ ಉತ್ಪನ್ನಗಳ ಬೆಲೆ ಮಾತ್ರ ಪ್ರತಿವರ್ಷ ಕುಸಿಯುತ್ತಲೇ ಇದೆ. ಇದೇ ಸಮಯದಲ್ಲಿ ಸರಕಾರಗಳು ರಸಗೊಬ್ಬರಗಳ ಬೆಲೆಯನ್ನು ಒಂದು ಬ್ಯಾಗ್ ಮೇಲೆ 450 ರಿಂದ 700 ರೂ.ಗಳವರಿಗೆ ಹೆಚ್ಚು ಮಾಡಿರುತ್ತದೆ.

ಈಗಾಗಲೇ ಕೃಷಿಯು ನಷ್ಟದಲ್ಲಿ ಇರುವಾಗ ಮತ್ತೆ ರಸಗೊಬ್ಬರಗಳ ಬೆಲೆ ಹೆಚ್ಚು ಮಾಡುವ ಮೂಲಕ ಕೃಷಿಯನ್ನು ಮತ್ತಷ್ಟು ತೊಂದರೆಗೆ ತಿಳಿದಂತಿದೆ. ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ದುಪ್ಪಟ್ಟು ಲಾಭ ತಂದುಕೊಡುತ್ತೇವೆ ಎಂದು ಹೇಳಿಕೊಂಡು ಕೃಷಿ ಉತ್ಪಾದನಾ ವೆಚ್ಚವನ್ನು ಹೆಚ್ಚು ಮಾಡುವ ಮೂಲಕ ರೈತರನ್ನು ಕೃಷಿಯಿಂದ ಹೊರಹಾಕುವ ಎಲ್ಲಾ ಪ್ರಯತ್ನ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ಜೊತೆಯಲ್ಲಿ ರೈತರಿಗೆ ನೀಡುತ್ತಿದ್ದ ಎಲ್ಲಾ ರೀತಿಯ ಸಹಾಯಧನಗಳನ್ನು ಕಡಿತ ಕಡಿಮೆ ಮಾಡಿ, ಒಂದು ವರ್ಷಕ್ಕೆ 6000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗೆ ಹಾಕುವುದೇ ಒಂದು ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿವೆ.

ಕೇಂದ್ರ ಸರ್ಕಾರವು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಪ್ರಯತ್ನ ಮಾಡುತ್ತಿರುವದರ ಜೊತೆ ಜೊತೆಯಲ್ಲಿ ಕೃಷಿ ಉಚ್ಛಾದನಾ ವೆಚ್ಚದ ದುಪ್ಪಟ್ಟು ಮಾಡುವ ಮೂಲಕ ರೈತಲೇ ಕೃಷಿಯಿಂದ ಹೊರ ಹೋಗುವಂತೆ ಮಾಡುತ್ತಿದೆ. ರಸಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳು ಹಾಗೂ ಬಿತ್ತನೆ ಬೀಜಗಳ ಬೆಲೆಗಳು ಪ್ರತಿವರ್ಷ ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ. ಕೊರೋನಾ ಸೋಂಕು ಹರಡದಂತೆ ಲಾಕ್‌ಡೌನ್ ಘೋಷಣೆ ಮಾಡಿದ್ದು, ರೈತರು ಬೆಳೆದ ತರಕಾರಿ, ಹಣ್ಣು, ಹೂವು ಇತರೇ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಒದಗಿಸಬೇಕು, ಮಾರುಕಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಬೆಲೆ ಕುಸಿಯದಂತೆ ನೋಡಿಕೊಳ್ಳಬೇಕು.

ಈ ಕೂಡಲೇ ಸರಕಾರಗಳು ರಸಗೊಬ್ಬರಗಳ ಮೇಲೆ ಹೆಚ್ಚಿಸಿರುವ ಬೆಲೆಯನ್ನು ವಾಪಸ್ಸು ಪಡೆದು ಕಷ್ಟದಲ್ಲಿ ಇರುವ ರೈತರ ಕೈ ಬಲಪಡಿಸಬೇಕೆಂದು ಒತ್ತಾಯಿಸುತ್ತೇವೆ. ತಪ್ಪಿದಲ್ಲಿ ರಾಜ್ಯದ ರೈತರು ಉಗ್ರ ಪ್ರತಿಭಟನೆಯ ಬಿಸಿಯನ್ನಬು ಸರಕಾರ ಎದುರಿಸಬೇಕಾಗುತ್ತದೆಂದು ಎಂದು ಎಚ್ಚರಿಸುತ್ತಿದ್ದೇವೆ ಎಂದು ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ ದೊಡ್ಡನಾಯ್ಕರ ಹೇಳಿದರು. ಈ ವೇಳೆ ಸಂಚಾಲಕರಾದ ರಾಜು ರತ್ನಪ್ಪನವರ, ಮಂಜುನಾಥ ಹುಕ್ಕೇರಿ, ಪಕ್ಕೀರ ಆರೇರ, ಶೇಕಪ್ಪ ಬಡಿಗೇರ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಇದ್ದರು.