5 ಜಿ ಬಳಕೆಗೆ ಕೇಂದ್ರ ಸರಕಾರ ಅಸ್ತು
ದೆಹಲಿ :5 ಜಿ ತಂತ್ರಜ್ಞಾನದ ಬಳಕೆ ಮತ್ತು ಅನ್ವಯಿಕೆಗಳಿಗಾಗಿ ಪ್ರಯೋಗಗಳನ್ನು ನಡೆಸಲು ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿಎಸ್ಪಿ) ಅನುಮತಿ ನೀಡಲಾಗಿದೆ ಎಂದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (ಡಿಒಟಿ) ಇಂದು ತಿಳಿಸಿದೆ. ಅರ್ಜಿದಾರ ಟಿಎಸ್ಪಿಗಳಲ್ಲಿ ಭಾರ್ತಿ ಏರ್ಟೆಲ್ ಲಿಮಿಟೆಡ್, ರಿಲಯನ್ಸ್ ಜಿಯೋಇನ್ಫೋಕಾಮ್ ಲಿಮಿಟೆಡ್, ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ಎಂಟಿಎನ್ಎಲ್ ಸೇರಿವೆ.
ಈ ಟಿಎಸ್ಪಿಗಳು ಎರಿಕ್ಸನ್, ನೋಕಿಯಾ, ಸ್ಯಾಮ್ಸಂಗ್ ಮತ್ತು ಸಿ-ಡಾಟ್ ಮೂಲ ಸಾಧನ ತಯಾರಕರು ಮತ್ತು ತಂತ್ರಜ್ಞಾನ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಇದಲ್ಲದೆ, ರಿಲಯನ್ಸ್ ಜಿಯೋಇನ್ಫೋಕಾಮ್ ಲಿಮಿಟೆಡ್ ತನ್ನದೇ ಆದ ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಯೋಗಗಳನ್ನು ನಡೆಸಲಿದೆ. ಟಿಎಸ್ಪಿಗಳು ಸ್ವತಃ ಗುರುತಿಸಿರುವ ಆದ್ಯತೆ ಮತ್ತು ತಂತ್ರಜ್ಞಾನ ಪಾಲುದಾರರ ಪ್ರಕಾರ ಅನುಮತಿಗಳನ್ನು ಡಿಒಟಿ ನೀಡಿದೆ.
ಮಿಡ್-ಬ್ಯಾಂಡ್ (3.2 GHz ನಿಂದ 3.67 GHz), ಮಿಲಿಮೀಟರ್ ತರಂಗ ಬ್ಯಾಂಡ್ (24.25 GHz ನಿಂದ 28.5 GHz) ಮತ್ತು ಸಬ್-ಗಿಗಾಹೆರ್ಟ್ಜ್ ಬ್ಯಾಂಡ್ (700 GHz) ಸೇರಿದಂತೆ ವಿವಿಧ ಬ್ಯಾಂಡ್ಗಳಲ್ಲಿ ಪ್ರಾಯೋಗಿಕ ವರ್ಣಪಟಲವನ್ನು ನೀಡಲಾಗುತ್ತಿದೆ ಮತ್ತು ಪ್ರಯೋಗಗಳ ಅವಧಿ, ಪ್ರಸ್ತುತ 6 ತಿಂಗಳ ಅವಧಿಯಾಗಿದೆ.