ಕೋವಿಡ್ ಎರಡನೇ ಅಲೆಯಲ್ಲಿಯೂ ಜನರ ರಕ್ಷಣೆಗೆ ನಿಂತ ಡಿಸಿಸಿ ಬ್ಯಾಂಕ್
ಬೆಳಗಾವಿ :ಕೊರೋನಾ ಮಹಾಮಾರಿಯಿಂದ ಸೋಂಕಿತರು ಆಕ್ಸಿಜನ್ ಆಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ಡಿಸಿಸಿ ಬ್ಯಾಂಕ್ನಿಂದ ಎಲ್ಲ ನಿರ್ದೇಶಕರ ಸರ್ವಾನುಮತದಿಂದ ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ 350 ಸಿಲೆಂಡರ್ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಶುಕ್ರವಾರ ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 350 ಸಿಲಿಂಡ್ರಗಳನ್ನು ಉತ್ಪಾದನೆ ಮಾಡುವ ಘಟಕವನ್ನು ಬೆಳಗಾವಿಯ ಹಾಗೂ ಚಿಕ್ಕೋಡಿಯಲ್ಲಿ ಹಾಕುವುದರ ಮೂಲಕ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಈ ಕೆಲಸ ಮಾಡಲಾಗುವುದು ಎಂದು ಹೇಳಿದರು.