Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜೀತೋ ವತಿಯಿಂದ ರ‍್ತಕದಾನ ಶಿಬಿರ

localview news

ಬೆಳಗಾವಿ:ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶಷನ ( ಜೀತೋ) ಸಂಸ್ಥೆಯ ವತಿಯಿಂದ ಹಾಗೂ ಜೀತೋ ಮಹಿಳಾ ಘಟಕ ಮತ್ತು ಜೀತೋ ಯುವ ಘಟಕದ ಸಹಯೋಗದಲ್ಲಿ ಇತ್ತಿಚಿಗೆ ಮಹಾವೀರ ಬ್ಲಡ ಬ್ಯಾಂಕನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕೇಂದ್ರ ಸರಕಾರ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಯುವಕರಿಗೆ ಕೋವಿಡ ಲಸಿಕೆ ನೀಡಲು ನಿರ್ಧರಿಸಿದೆ . ಈ ಹಿನ್ನೆಲೆಯಲ್ಲಿ ಯುವಕರು ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡಿ ರಕ್ತವನ್ನು ಶೇಖರಣೆ ಮಾಡುವ ಉದ್ದೇಶದಿಂದ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಹಾವೀರ ಬ್ಲಡ ಬ್ಯಾಂಕ್‌ನ ಅಧ್ಯಕ್ಷರಾದ ರಾಜೇಂದ್ರ ಜೈನ ಕಟಾರಿಯಾ ಅವರು ಶಿಬಿರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜೀತೋ ಸಂಸ್ಥೆಯ ಅಧ್ಯಕ್ಷ ಸುನಿಲ ಕಟಾರಿಯಾ, ಕಾರ್ಯದರ್ಶಿ ಅಂಕಿತ ಖೋಡಾ, ಮಹಿಳಾ ಘಟಕದ ಅಧ್ಯಕ್ಷ ಅರುಣಾ ಶಹಾ, ಕಾರ್ಯದರ್ಶೀ ಶಿಲ್ಪಾ ಹಜಾರೆ, ಯುವ ಘಟಕದ ಅಧ್ಯಕ್ಷ ಅಮೋಘ ನಿಲಜಗಿ , ಕಾರ್ಯದರ್ಶಿ ಪ್ರಕಾಶ ಜಕ್ಕನ್ನವರ ಕಾರ್ಯಕ್ರಮ ಸಂಯೋಜಕ ಪ್ರವೀಣ ಖೇಮಲಾಪೂರೆ, ಮನೋಜ ಸಂಚೇತಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಈ ರಕ್ತದಾನ ಶಿಬಿರದಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.