Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪ.ಪೂ. ಆಸಾರಾಮಜಿ ಬಾಪೂ ಅವರಿಗೆ ಜಾಮೀನು ನೀಡುವಂತೆ ಹಿಂದೂ ಜನಜಾಗೃತಿ ಸಮಿತಿಯ ಒತ್ತಾಯ

localview news

ನಗರ ನಕ್ಸಲ ವರವಾರ ರಾವ್ ಇವರಿಗೆ ಜಾಮೀನು ಸಿಗುವಾಗ ‘ಕೋವಿಡ್’ನಿಂದ ಪೀಡಿತರಾಗಿರುವ ಪೂ. ಆಸಾರಾಮಜಿ ಬಾಪೂರಿಗೆ ಏಕೆ ಸಿಗುವುದಿಲ್ಲ ? - ಹಿಂದೂ ಜನಜಾಗೃತಿ ಸಮಿತಿಯ ಪ್ರಶ್ನೆ

ಪೂ. ಆಸಾರಾಮಜಿ ಬಾಪೂರವರಿಗೆ ಜೈಲಿನಲ್ಲಿ ಕೊರೋನಾ ಸೋಂಕು ತಗಲಿದ ಮೇಲೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೇ ಇದ್ದರಿಂದ ಅವರನ್ನು ಜೋಧಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಇದರಿಂದ ರಾಜಸ್ಥಾನ ಸರಕಾರದ ದುರ್ಲಕ್ಷತನ ಕಂಡುಬರುತ್ತದೆ. ೮೦ ವರ್ಷ ವಯಸ್ಸಾಗಿರುವ ಮತ್ತು ಅನೇಕ ಕಾಯಿಲೆಗಳೊಂದಿಗೆ ಹೋರಾಡುತ್ತಿರುವ ಬಾಪೂಜಿಯವರನ್ನು ಕೊರೋನಾದ ದೃಷ್ಟಿಕೋನದಿಂದ ಕಾಳಜಿ ವಹಿಸುವುದು ಸರಕಾರದ ಕರ್ತವ್ಯವಾಗಿದೆ. ಸರಕಾರಿ ವ್ಯವಸ್ಥೆಯು ಅವರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆಂಬ ಸಾಧ್ಯತೆ ಕಂಡುಬರುತ್ತಿಲ್ಲ. ಆದ್ದರಿಂದ ಅವರಿಗೆ ಸರಿಯಾದ ಮತ್ತು ತುರ್ತಾಗಿ ಚಿಕಿತ್ಸೆ ಸಿಗಬೇಕು ಹಾಗೂ ಅವರಿಗೆ ತಕ್ಷಣ ಜಾಮೀನು ನೀಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದ ಅನೇಕ ಸೆರೆಮನೆಗಳಲ್ಲಿ ಕೊರೋನಾದ ಸೋಂಕು ಹರಡಿದ್ದರಿಂದ ಸರಕಾರವು ಅನೇಕ ಕೈದಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತು. ನಗರ ನಕ್ಸಲರಾದ ವರವರಾ ರಾವ ಇವರ ಮೇಲೆ ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ಆರೋಪವಿದ್ದರೂ ಅವರ ವಯಸ್ಸು ಮತ್ತು ಅನಾರೋಗ್ಯದ ಆಧಾರದಲ್ಲಿ ಅವರಿಗೆ ಜಾಮೀನು ನೀಡಲಾಯಿತು; ಹಾಗಾದರೆ ಪ.ಪೂ. ಬಾಪೂಜಿಯವರಿಗೆ ಕೊರೋನಾ ಆಗಿದ್ದರೂ, ಅವರಿಗೆ ಏಕೆ ಜಾಮೀನು ಸಿಗಬಾರದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ.ಪೂ.ಬಾಪೂಜಿಯವರಿಗೆ ಕರೋನಾ ಆದನಂತರ ಕೂಡಲೇ ಆಸ್ಪತ್ರೆಗೆ ದಾಖಲಿಸದೇ ನಾಲ್ಕು ದಿನಗಳ ನಂತರ ತೀವ್ರ ಅನಾರೋಗ್ಯದ ನಂತರವೇ ಏಕೆ ಆಸ್ಪತ್ರೆಗೆ ದಾಖಲಿಸಲಾಯಿತು ? ಇದರಿಂದ ಸರಕಾರವು ಹಿಂದೂ ಸಮಾಜ ಮತ್ತು ಹಿಂದೂ ಸಂತರ ಬಗ್ಗೆ ಸಂವೇದನಾಶೀಲವಿಲ್ಲ ಎಂಬುದು ತೋರಿಸುತ್ತದೆ.

ಹಿಂದೂ ಜನಜಾಗೃತಿ ಸಮಿತಿಯು ಪೂ. ಆಸಾರಾಮಜಿ ಬಾಪು ಅವರ ಉತ್ತಮ ಆರೋಗ್ಯಕ್ಕಾಗಿ ಈಶ್ವರನ ಚರಣಗಳಲ್ಲಿ ಪ್ರಾರ್ಥಿಸುತ್ತದೆ. ಪೂ. ಆಸಾರಾಮಜಿ ಬಾಪೂ ಇವರಿಗೆ ಆದಷ್ಟು ಬೇಗ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲಿ ಮತ್ತು ಅವರಿಗೆ ಜಾಮೀನು ನೀಡಬೇಕು ಎಂದು ಒತ್ತಾಯಿಸುತ್ತಿದೆ.