Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಕ್ರಮಾದಿತ್ಯ (INS) ಹಡಗಿನಲ್ಲಿ ತಪ್ಪಿದ ಅಗ್ನಿ ಅನಾಹುತ

localview news

ಕಾರವಾರ: ಇಂದು ಬೆಳ್ಳಂಬೆಳಗ್ಗೆ ಭಾರತದ ಪ್ರಮುಖ ಯುದ್ಧ ವಿಮಾನ ವಾಹಕ INS ವಿಕ್ರಮಾದಿತ್ಯದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ .ವಿಮಾನ ವಾಹಕ ನೌಕೆಯು ಜುಲೈ 2013 ರಲ್ಲಿ ಸಮುದ್ರ ವಾಯುಯಾನ ಪ್ರಯೋಗಗಳನ್ನು ಪೂರ್ಣಗೊಳಿಸಿತ್ತು . ಜೂನ್ 14 , 2014 ರಂದು ಐಎನ್‌ಎಸ್ ವಿಕ್ರಮಾದಿತ್ಯನೌಕೆಯನ್ನು ಭಾರತೀಯ ನೌಕಾಪಡೆಗೆ ಸೇರಿಸಿಕೊಳ್ಳಲಾಯಿತು . ಆದರೆ‌ ಇಂದು ಹಡಗಿನ ಒಂದು ಭಾಗದಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ಕರ್ತವ್ಯದಲ್ಲಿರುವ ಸಿಬ್ಬಂದಿ ಗಮನಿಸಿದರು . ಅದನ್ನು ನಂದಿಸಲು ತ್ವರಿತವಾಗಿ ಕಾರ್ಯನಿರ್ವಹಿಸಿದರು.ಯಾವುದೇ ತರಹದ ದೊಡ್ಡ ಹಾನಿಯಾಗಿಲ್ಲ ಎಂದು ಭಾರತೀಯ ನೌಕಾಪಡೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಮಾಂಡರ್ ಮೆಹುಲ್ ಕಾರ್ಣಿಕ್ ತಿಳಿಸಿದ್ದಾರೆ . ಈ ಹಡಗು ಕರ್ನಾಟಕದ ಕಾರವಾರ ಬಂದರಿನಲ್ಲಿದ್ದು , ಸಿಬ್ಬಂದಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ . ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಕಾರ್ಣಿಕ್ ಮಾಹಿತಿ ನೀಡಿದ್ದಾರೆ.