Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ತಾಯಿಯಂತೆ ಹಸಿವು ನೀಗಿಸಿದ ನಿಯತಿ ಫೌಂಡೇಶನ್

localview news

ಬೆಳಗಾವಿ: ಮಹಾಮಾರಿ ಕೊರೋನಾ ಸಂಕಷ್ಟದಲ್ಲಿಯೂ ಕೂಡ ವಿಶ್ವ ತಾಯಿಂದರ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಮುಂದಾಗಿದೆ ನಗರದ ನಿಯತಿ ಫೌಂಡೇಶನ್.

ಹೌದು, ಇಂದು " ವಿಶ್ವ ತಾಯಿಂದರ ದಿನ " ಇಡೀ ಜೀವ ಸಂಕುಲಕ್ಕೆ ಕಾರಣವಾದವಳು ತಾಯಿ. ಈ ತಾಯಂದಿರ ದಿನದ ವಿಶೇಷತೆಗಾಗಿ ಬೆಳಗಾವಿ ನಗರದಲ್ಲಿರುವ ನಿಯತಿ ಫೌಂಡೇಶನ್ ವತಿಯಿಂದ ಈ ಕೊರೋನಾ ಲಾಕ್‌ಡೌನ್‌ ಸಂಕಷ್ಟದಲ್ಲಿ ಸಿಲುಕಿರುವ ನಗರದ ಒಂಟಿ ತಾಯಂದಿರನ್ನು ಗುರುತಿಸಿ ಅವರಿಗೆ 15 ದಿನಗಳ ವರೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ನೀಡುತ್ತಾ ಸುಮಾರು 3000 ಕಿಟ್ ಗಳನ್ನು ಹಂಚಿಕೆ ಮಾಡಿದರು.

logintomyvoice

ಜೊತೆಗೆ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಕುಟುಂಬ ಸಾಕಲು ತೊಂದರೆ ಅನುಭವಿಸುತ್ತಿರುವ ಅದೆಷ್ಟೋ ಬಡ ಕುಟುಂಬಗಳಿಗೆ ಹಲವು ರೀತಿಯಲ್ಲಿ ಸಹಾಯಹಸ್ತ ಚಾಚಿದ್ದಾರೆ. ಕೆಲವರಿಗೆ ಪಿಪಿಇಕಿಟ್ಸ್, ಇಮ್ಯುನೊಬೂಸ್ಟರ್ ಮತ್ತು ಕಿರಾಣಿ ಕಿಟ್‌ಗಳನ್ನು ವಿತರಿಸುವ ಮೂಲಕ ಕೋವಿಡ್‌ನ ಮೊದಲ ಹಂತದಲ್ಲಿ ನಿರ್ಗತಿಕರಿಗೆ ಸೇವೆ ಸಲ್ಲಿಸಿದ್ದಾರೆ.

logintomyvoice

ಈ ಬಾರಿ ಹೆಚ್ಚು ಅಪಾಯಕಾರಿಯಾದ ಎರಡನೇ ಹಂತದ ಸಮಯದಲ್ಲಿ ಡಾ. ಸೋನಾಲಿ ಸರ್ನೋಬತ್ ಅವರು ಅಗತ್ಯವಿರುವ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ಮತ್ತು ಔಷದ ಉಪಚಾರಗಳನ್ನು ವಿತರಿಸುವ ಮೂಲಕ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

ಕೊರೋನಾ ಮಹಾಮಾರಿ ನಿರ್ನಾಮ ಮಾಡಲು ಎಲ್ಲರೂ ದಯವಿಟ್ಟು ಮಾಸ್ಕ್ ಧರಿಸಬೇಕು, ವ್ಯಾಕ್ಸಿನೇಷನ್ ತೆಗೆದುಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯವಿದ್ದರೆ ಮಾತ್ರ ಹೊರಗೆ ಬನ್ನಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯ ನಿಮ್ಮ ಕೈಯಲ್ಲಿದೆ ಸದಾ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು.

ನಿಜವಾಗಲೂ ಇಂತಹ ಪವಿತ್ರ ದಿನದಂದು ಹಸಿದವರಿಗೆ ಅನ್ನ ನೀಡುತ್ತಾ ಕೊರೋನಾ ಸಂಕಷ್ಟದಲ್ಲಿ ಕಷ್ಟ ಪಡುವ ಜನರಿಗೆ ಸಹಾಯಹಸ್ತ ಚಾಚುತ್ತಿರುವ ನಿಯತಿ ಫೌಂಡೇಶನ್ ಗೆ ನಮ್ಮ ಲೋಕಲ್ ವಿವ್ ಟೀಂ ಧನ್ಯವಾದ ಸಲ್ಲಿಸುತ್ತದೆ...