ಅವ್ವ ಅವ್ವ ನಿನಗ್ಯಾರು ಸಮ ತಾಯಿಯ ಶ್ರೇಷ್ಠತೆ ವ್ಯಕ್ತ ಪಡಿಸಿದ ನವಲೂರಿನ ತಾನಾಜಿ
ಅವ್ವ ಅವ್ವ ಸಮನಿನಗ್ಯಾರಿಹರವ್ವ
ಅವ್ವ ಅವ್ವ ನೀನೆ ಮಕ್ಕಳ ದೈವ
ಬೇಡ ಬೇಡ ಅಂದರೂನು
ಓಡಿ ಓಡಿ ಹೋದರೂನು
ಬಿಡದೆ ಬರುತ್ತ ಬೆನ್ನು
ನೀಡಿದೆ ಕೈತುತ್ತ ನೀನು.
ತಪ್ಪು ಮಾಡಿ ಮಗನು
ಒಪ್ಪಿ ಕೊಳ್ಳದಿದ್ದರೂನು
ಅಪ್ಪಿ ಸುರಿವೆ ಪ್ರೀತಿಯನ್ನು
ರೆಪ್ಪೆಯಾದ ವಾತ್ಸಲ್ಯ ನೀನು.
ತೆಂಗು ಕುಡಿದರು ಉಪ್ಪು ನೀರು
ಎಳೆನೀರು ಕೊಡುವ ಹಂಗೆ
ಮಗು ಮೊಗದ ನಗು ನೋಡಿ
ಹೆರಿಗೆ ನೋವ ಮರೆತೆ ಹೇಗೆ
ಮಗು ಅತ್ತರು ಆ ಒಂದು ಕ್ಷಣ
ಮಮತಾಮಯಿ ನಕ್ಕ ಮೊದಲ ದಿನ
ಛತ್ರಪತಿ ಶಿವಾಜಿ ಮಹಾರಾಜರಾದರು
ಮಾತೆ ಜೀಜಾಬಾಯಿಯಿಂದಲೆ
ಹಡೆದ ದೇವಕಿ ಹೊಡೆದ ಯಶೋದೆಯಾದರು
ಶ್ರೀಕೃಷ್ಣನಿಗೆ ಇಬ್ಬರೂ ತಾಯಿನೆ
ಬುದ್ದಿವಂತರನ್ನು ಗೌರವಿಸುವುದು ಜನ
ಬುದ್ದಿಮಾದ್ಯರನ್ನು ಪ್ರೀತಿಸುವುದು ತಾಯಿಮನ
ನವಲೂರ ತಾನಾಜಿ-9036604761
ನೀವು ಕೂಡಾ ನಿಮ್ಮ ಬರಹವನ್ನು ನಿಮ್ಮ ಹೆಸರು ಮತ್ತು ಊರಿನ ಹೆಸರು ನಮೂದಿಸಿ ನಮ್ಮ್ ಜೊತೆ ಹಂಚಿಕೊಳ್ಳಲು [email protected] ಗೆ ಇಮೇಲ್ ಮಾಡಿ.