Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದೇಶದ ಗಡಿ ರಕ್ಷಣೆಗಾಗಿ ಭಾರತೀಯ ಸೇನೆ ಸಿದ್ಧವಾಗಿದೆ : ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆ

localview news
ಲಡಾಕ್ ನ ಗಡಿಭಾಗದಲ್ಲಿ ಸೋಮವಾರ ತಡರಾತ್ರಿ ಭಾರತ ಮತ್ತು ಚೀನಾ 2 ಉಭಯ ಸೇನೆಗಳ ಮಧ್ಯೆ ದೊಡ್ಡ ಸಂಘರ್ಷ ನಡೆದಿತ್ತು. ಚೀನಾ ಸೇನೆಯ ಉದ್ಧಟ ವರ್ತನೆಗೆ ಭಾರತೀಯ ಸೈನಿಕರು ಕೂಡ ಪ್ರತ್ಯುತ್ತರವನ್ನು ನೀಡಿದ್ದು ಭಾರತೀಯ ಸೇನೆ ದೇಶದ ಗಡಿ ರಕ್ಷಣೆಗಾಗಿ ಸಿದ್ಧವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ‌ ಅಂಗಡಿ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.
ದೇಶದ ಗಡಿ ರಕ್ಷಣೆ ಉಳಿವಿಗಾಗಿ ತಮ್ಮ ಪ್ರಾಣ ನೀಡಿ, ಹುತಾತ್ಮರಾಗಿರುವ ಎಲ್ಲ ಸೈನಿಕರಿಗೂ ಭಗವಂತ ಚಿರಶಾಂತಿ ನೀಡಲಿ. ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದರು.
ಇಡೀ ಜಗತ್ತು ಇವತ್ತು ಕೊರೊನಾ ವೈರಸ್​​​ನಿಂದ ತತ್ತರಿಸಿರುವ ಸಂದರ್ಭದಲ್ಲಿ ಚೀನಾ ಮತ್ತೊಮ್ಮೆ ತನ್ನ ನರಿ‌ ಬುದ್ಧಿ ತೋರಿಸಿದೆ. ದಾಳಿಯಲ್ಲಿ ಭಾರತದ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದು, ನಮ್ಮ ಸೇನೆ ಕೂಡ ಚೀನಾದ 43 ಸೈನಿಕರನ್ನು ಹೊಡೆದುರುಳಿಸಿದೆ.
ಭಾರತದ ರಕ್ಷಣೆಗಾಗಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಭಾರತೀಯ ಸೈನ್ಯ ಸಿದ್ದವಾಗಿ ನಿಂತಿದೆ. 1962 ರ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ಹೋಲಿಸಿದ್ರೆ 130 ಕೋಟಿ ಜನರು ದೇಶ ಕಾಯುವ ಸೈನಿಕರ ಹಿಂದೆ ಇದ್ದಾರೆ. ಸೈನಿಕರ ಕುಟುಂಬಸ್ಥರು ಯಾರೂ ಆತಂಕಕ್ಕೆ ಒಳಗಾಗಬಾರದು. ಲಡಾಖ್​​​​ಗೆ ರೈಲು ಸಂಚಾರ ಸ್ಥಗಿತ ವಿಚಾರ ಈಗ ವಿಡಿಯೋ ಕಾನ್ಫರೆನ್ಸ್​​​​​ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸುರೇಶ ಅಂಗಡಿ ಬೆಳಗಾವಿಯಲ್ಲಿ ಮಾಧ್ಯಮಗಳಿಕೆ ಹೇಳಿಕೆ ನೀಡಿದ್ದಾರೆ