Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಾತ್ರಿ ಮಲಗಿದವರಿಗೆ ಮುಂಜಾನೆ ಚುಮುಚುಮು ಚಳಿ

localview news

ಬೆಳಗಾವಿ: ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಣ ಮಾಡಲು ರಾಜ್ಯ ಸರಕಾರ ಸೆಮಿ ಲಾಕ್‌ಡೌನ್ ಮಾಡಿ ಬರೋಬರಿ ಐದು ದಿನ ಕಳೆದರೂ ರಸ್ತೆಗಳಲ್ಲಿ ಜನರನ್ನು ನಿಯಂತ್ರಸಲು ಪೊಲೀಸರು ಹರಸಾಹಸ ಪಡಬೇಕಾಗಿತ್ತು. ಆದರೆ ಶನಿವಾರ ತಡರಾತ್ರಿ ಮಲಗಿದವು ಭಾನುವಾರ ಬೆಳಗ್ಗೆ ಎದ್ದು ನೋಡುತ್ತಿದ್ದಂತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ವಾತಾವಣೆವೇ ಬದಲಾಗಿತ್ತು.

ಬೇಸಿಗೆಯ ಅನುಭವದಲ್ಲಿದ್ದವರು ಭಾನುವಾರ ಬೆಳಗ್ಗೆ ಎದ್ದು ನೋಡಿದರೆ ಮಳೆಗಾಲದ ಅನುಭವವಾಯಿತು. ಇತ್ತೀಚಿನ ವರ್ಷಗಳಲ್ಲಿ ಇಂದು ಇದ್ದಂತೆ ನಾಳೆ ಇರುವುದಿಲ್ಲ. ಹಾಗೆಯೇ ಇಂದು ದ್ದಂತೆ ನಾಳೆ ಇರುವುದಿಲ್ಲ. ಪ್ರಸಕ್ತ ವರ್ಷದಲ್ಲಿ ಬಿರು ಬಿಸಲಿ ಬೇಸಿಗೆಯ ಅನುಭವ ಅನುಭವಿಸುತ್ತಿದ್ದ ಜನರಿಗೆ ಒಂದೇ ರಾತ್ರಿಯಲ್ಲಿ ಮಳೆಗಾಲದ ಅನುಭವವಾಗಿದೆ.

ರಾತ್ರಿ ಮಲಗುವಾದ ಶಕೆಯ ವಾತಾವರಣ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಚುಮು ಚುಮು ಚಳಿಯ ಸೈಕ್ಲೋನ್ ಚಂಡ ಮಾರುತ್ತದ ಸೋನೆ ಮಳೆಯ ವಾತಾವರಣ ನೋಡಿ ಜನರು ರಸ್ತೆಗೆ ಬರದೆ ಮೆನೆಯಲ್ಲಿ ಕಾಲ ಕಳೆದರು.

ಕೊರೋನಾ ನಿಯಂತ್ರಿಸಲಿಕ್ಕಾಗಿ ಸರಕಾರ ಸೆಮಿ ಲಾಕ್‌ಡೌನ್ ಹೇರಿದೆ. ಆನರು ಅನಾವಶ್ಯಕವಾಗಿ ಓಡಾಡಬೇಡಿ ಎಂದರೂ ಜನರು ಮಾತ್ರ ಓಡಾಡುವುದನ್ನು ಬಿಟ್ಟಿರಲಿಲ್ಲ. ಆದರೆ ಪರಿಸರದಲ್ಲಿ ಆದ ಈ ಹಠಾತ್ ಬದಲಾವಣೆ ಜನರನ್ನು ಮನೆಯಿಂದ ಹೊರಗೆ ಬರದಂತೆ ಮಾಡಿದೆ.