Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಆಕ್ಸಿಜನ್ ಕಾನ್ಸಂಟ್ರೇಟರ ಸಾರ್ವಜನಿಕ ಸೇವೆಗೆ ಲಭ್ಯ

localview news

ಬೆಳಗಾವಿ: ಮಹಾಂತ ವಕ್ಕುಂದ ಫೌಂಡೇಶನ್ ವತಿಯಿಂದ ಇಂದು ಬೆಳಗಾವಿಯ ಕಾರಂಜಿಮಠದಲ್ಲಿ ಕೋವಿಡ ಸೋಂಕಿತರಿಗಾಗಿ 25 ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರಗಳನ್ನು ನೀಡುವ ಕಾರ್ಯಕ್ಕೆ ಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಜೀಯವರ ಅಮೃತ ಹಸ್ತದಿಂದ ಈ ಉಪಕರಣಗಳ ಪೂಜೆ ಮಾಡಿಸಿ ಚಾಲನೆ ನೀಡಲಾಯಿತು.

ಸಾರ್ವಜನಿಕ ಸೇವೆಗೆ ಇಂದಿನಿಂದ ಮುಕ್ತವಾಗಿಸಲಾಗಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ದಿಲೀಪ ಜೀ ವೇರ್ಣೇಕರ, ಶ್ರೀಕಾಂತ ಕದಮ, ಬಸವರಾಜ ಹಳಿಂಗಳಿ, ವಿಜಯ ಜಾಧವ, ಬಸವರಾಜ ಭಾಗೋಜಿ, ಸುನೀಲ ಗೌರಣ್ಣ, ಮಹಾಂತೇಶ ವಕ್ಕುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಆಕ್ಸಿಜನ್ ಕಾನ್ಸಂಟ್ರೇಟರ್ ಉಪಕರಣಗಳನ್ನು ಆಕ್ಸಿಜನ್ ಪ್ರಮಾಣ 80 ಕ್ಕಿಂತ ಮೇಲ್ಪಟ್ಟು ಹೊಂದಿರುವ ರೋಗಿಗಳು ಮನೆಯಲ್ಲಿ ಬಳಸಬಹುದು.

ಈ ಉಪಕರಣ ಸ್ವಯಂ ಆಮ್ಲಜನಕವನ್ನು ಉತ್ಪತ್ತಿ ಮಾಡಿ ಹಂಚುತ್ತದೆ. ಈ ಉಪಕರಣವನ್ನು ಬಳಸಲು ಇಚ್ಚಿಸುವವರು ಮಹಾಂತ ವಕ್ಕುಂದ ಫೌಂಡೇಶನ್ನನ್ನು ಸಂಪರ್ಕಿಸಲು ಕೋರಲಾಗಿದೆ.