Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಶಾಲಗಡ ಮೇಲೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ನರವೀರ ಬಾಜಿಪ್ರಭು ದೇಶಪಾಂಡೆಯವರ ಪರಾಕ್ರಮದ ಭವ್ಯ ಸ್ಮಾರಕವನ್ನು ನಿರ್ಮಿಸಿರಿ: ಸುನೀಲ ಘನವಟ

localview news

ಬೆಳಗಾವಿ : ಇಂದು ೩೫೦ ವರ್ಷಗಳ ಬಳಿಕ ಛತ್ರಪತಿ ಶಿವಾಜಿ ಮಹಾರಾಜರು ಕಟ್ಟಿದ ಕೋಟೆ-ಕಿಲ್ಲೆಗಳ ಪರಾಕ್ರಮದ ವಿಷಯದಲ್ಲಿ ಚರ್ಚೆಗಳು ನಡೆಯುವ ಅವಶ್ಯಕತೆಯಿರುವಾಗ ‘ ವಿಶಾಲಗಡದ ಇಸ್ಲಾಮೀಕರಣವನ್ನು ತಡೆಯಿರಿ ಈ ವಿಷಯದ ಮೇಲೆ ಚರ್ಚೆಯಾಗುತ್ತಿರುವುದು ಅತ್ಯಂತ ದುರ್ಭಾಗ್ಯವಾಗಿದೆ. ಯಾವ ವಿಶಾಲಗಡವನ್ನು ನರವೀರ ಬಾಜಿಪ್ರಭು ದೇಶಪಾಂಡೆ ಮತ್ತು ಫುಲಾಜಿಪ್ರಭು ದೇಶಪಾಂಡೆಯವರ ಹೆಸರಿನಿಂದ ಗುರುತಿಸಬೇಕಾಗಿತ್ತೋ, ಇಂದು ಅದನ್ನು ‘ರೆಹಾನಬಾಬಾ ದರ್ಗಾ ಈ ಹೆಸರಿನಿಂದ ಗುರುತಿಸಲಾಗುತ್ತಿದೆ. ಈ ಕೋಟೆಯ ಮೇಲೆ ರೆಹಾನಬಾಬಾ ದರ್ಗಾ ರಸ್ತೆಗಾಗಿ ಮತ್ತು ಸೌಂದರ್ಯಿಕರಣಕ್ಕಾಗಿ ಸರಕಾರವು 10 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ; ಆದರೆ ನರವೀರರ ಸಮಾಧಿಯ ಮೇಲೆ ಮೇಲ್ಛಾವಣಿ ನಿರ್ಮಿಸಲು ಸರಕಾರದ ಬಳಿ ಹಣವಿಲ್ಲ.

ಕೆಲವು ಶಿವಾಜಿಪ್ರೇಮಿ ಸಂಘಟನೆಗಳು ತಮ್ಮ ಸ್ವಂತ ವೆಚ್ಚದಿಂದ ಈ ಸಮಾಧಿಗೆ ಮೇಲ್ಛಾವಣಿ ನಿರ್ಮಿಸಿದ್ದಾರೆ. ಹಿಂದುತ್ವನಿಷ್ಠ ಸಂಘಟನೆಗಳು ಕೋಟೆಯ ಮೇಲೆ ಮಾಹಿತಿ ನೀಡುವ ಫಲಕವನ್ನು ಹಚ್ಚಿದಾಗ, ಅದನ್ನು ಮತಾಂಧರು ಕಿತ್ತೆಸೆದರು. ಕೋಟೆಯ ಮೇಲೆ ಕುದುರೆಯ ಗೊರಸಿನ ತೀರ್ಥಕ್ಕೆ ರೇಹಾನಬಾಬಾ ತೀರ್ಥವೆಂದು ಹೇಳಲಾಗುತ್ತಿದೆ. ಇದು ಕೋಟೆಯ ಇಸ್ಲಾಮೀಕರಣವಲ್ಲದೇ ಮತ್ತೇನು? ಕೋಟೆಯ ಗ್ರಾಮದೇವತೆ ಶ್ರೀ ಭಾವಜಾಯಿ ಮಂದಿರದ ಕ್ಷೇತ್ರ ವ್ಯಾಪ್ತಿ 3500 ಚ.ಫೂಟಗಳಿಂದ 700 ಚ.ಫೂಟ. ಹೇಗಾಯಿತು? ಈ ರೀತಿ ಅನೇಕ ಮಂದಿರಗಳ ಕ್ಷೇತ್ರವನ್ನು ಕಡಿಮೆ ಮಾಡಲಾಗಿದೆ. ಕೆಲವು ಮಂದಿರಗಳ ನೊಂದಣಿಯು ಕಣ್ಮರೆಯಾಗಿವೆ. ಇನ್ನೊಂದೆಡೆ ಕೋಟೆಯ ಮೇಲೆ ಸುಮಾರು 100 ಕ್ಕಿಂತ ಅಧಿಕ ಅತಿಕ್ರಮಣಗಳಾಗಿವೆ.

ವಿಶಾಲಗಡದ ಮೇಲಿರುವ ಈ ಎಲ್ಲ ಅತಿಕ್ರಮಣಗಳಿಗೆ ಮತ್ತು ಇಸ್ಲಾಮೀಕರಣಕ್ಕೆ ಪುರತತ್ವ ಇಲಾಖೆ ಜವಾಬ್ದಾರಿಯಾಗಿದೆ. ಈ ಎಲ್ಲ ಅತಿಕ್ರಮಣವನ್ನು ತಕ್ಷಣವೇ ಕಿತ್ತೆಸೆದು ಛತ್ರಪತಿ ಶಿವಾಜಿ ಮಹಾರಾಜ, ನರವೀರ ಬಾಜಿಪ್ರಭು ದೇಶಪಾಂಡೆ ಮತ್ತು ಫುಲಾಜಿಪ್ರಭು ದೇಶಪಾಂಡೆಯವರಂತಹ ಸೈನಿಕರ ಪರಾಕ್ರಮದ ಭವ್ಯ ಸ್ಮಾರಕವನ್ನು ಕೋಟೆಯ ಮೇಲೆ ನಿರ್ಮಾಣ ಮಾಡಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸಗಡ ರಾಜ್ಯ ಸಂಘಟಕರಾದ ಶ್ರೀ ಸುನೀಲ ಘನವಟ ಇವರು ಮನವಿ ಮಾಡಿದರು. ‘ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಛ. ಶಿವಾಜಿ ಮಹಾರಾಜರ ವಿಶಾಲಗಡದ ಇಸ್ಲಾಮೀಕರಣವನ್ನು ತಡೆಗಟ್ಟಿರಿ ಈ ‘ಆನ್‌ಲೈನ್ ವಿಶೇಷ ಚರ್ಚೆಯಲ್ಲಿ ಮಾತನಾಡುತ್ತಿದ್ದರು.

ಈ ಕಾರ್ಯಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯ ಸಂಕೇತಸ್ಥಳ Hindijagruti.org ಯು ಟ್ಯೂಬ ಮತ್ತು ಟ್ವಿಟರ್ ಮೇಲೆ ನೇರ ಪ್ರಸಾರ ಮಾಡಲಾಯಿತು. 7911 ವೀಕ್ಷಕರು ಈ ಕಾರ್ಯಕ್ರಮವನ್ನು ನೋಡಿದರು. ಈ ಕಾರ್ಯಕ್ರಮದಲ್ಲಿ ಬಾಜಿಪ್ರಭು ದೇಶಪಾಂಡೆಯವರ ಹನ್ನೊಂದನೇ ವಂಶಜರಾದ ಶ್ರೀ ಸಂದೇಶ ದೇಶಪಾಂಡೆಯವರು ಮಾತನಾಡುತ್ತಾ, ವಿಶಾಲಗಡ ಘಟ್ಟಪ್ರದೇಶ ಮತ್ತು ಕೊಂಕಣಪಟ್ಟಿಯ ಸಂಚಾರದ ಮೇಲೆ ಗಮನವಿಡಲು ನಿರ್ಮಿಸಲಾಗಿತ್ತು; ಆದರೆ ಇಂದು ಈ ಕೋಟೆಯ ಮೇಲೆ ಗಮನವಿಡುವ ಸಂದರ್ಭವನ್ನು ಸರಕಾರ ತಂದಿದೆ. ಸ್ಥಳೀಯ ಗ್ರಾಮಸ್ಥರು ಮತ್ತು ಶಿವಾಜಿಪ್ರೇಮಿ ಸಂಘಟನೆಗಳು ಕೋಟೆಯ ಮೇಲೆ ನಿಗಾವಹಿಸಲು ಸಿದ್ಧರಾಗಿದ್ದಾರೆ; ಆದರೆ ಪುರಾತತ್ವ ಇಲಾಖೆಯು ಅವರಿಗೆ ಏನನ್ನೂ ಮಾಡಲು ಬಿಡುತ್ತಿಲ್ಲ ಮತ್ತು ಸ್ವತಃ ತಾವೂ ಏನೂ ಮಾಡುವುದಿಲ್ಲ ಇದು ಶೋಚನೀಯವಾಗಿದೆ.

ಇದರಿಂದ ಕೋಟೆಯ ಮೇಲಿನ ಅನೇಕ ಮಂದಿರಗಳು ಜೀರ್ಣಾವಸ್ಥೆಯಲ್ಲಿವೆಯೆಂದು ಹೇಳಿದರು. ಮೂರ್ತಿ ಅಧ್ಯಯನಕಾರರಾದ ಶ್ರೀ ಪ್ರಮೋದ ಸಾವಂತ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಏನು ಮಾಡಬೇಕೆನ್ನುವ ತಿಳುವಳಿಕೆಯಿಲ್ಲ. ಅವರಿಗೆ ಅವರ ವ್ಯಾಪ್ತಿಗೆ ಬರುವ ವಿಷಯಗಳನ್ನು ಒತ್ತಾಯಪೂರ್ವಕವಾಗಿ ತಿಳಿಸಿ ಹೇಳಬೇಕಾಗುತ್ತದೆ. ವಿಶಾಲಗಡದ ಮೇಲಿರುವ ಮಂದಿರಗಳು ಮತ್ತು ಸ್ಮಾರಕಗಳ ಕಾಮಗಾರಿಗಳನ್ನು ಸ್ವಂತ ವೆಚ್ಚದಿಂದ ಮಾಡಲು ಅನೇಕ ಸಂಸ್ಥೆಗಳು ಸಿದ್ಧವಾಗಿದೆಯೆಂದು ಹೇಳಿದರು. ಕೊಲ್ಹಾಪೂರದ ‘ ಸವ್ಯಸಾಚಿ ಗುರುಕುಲದ ಮುಖ್ಯ ಪ್ರಾಚಾರ್ಯರಾದ ಲಖನ ಜಾಧವ ಇವರು ಮಾತನಾಡುತ್ತಾ‘ ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ಅನೇಕ ರಾಜ್ಯಗಳಲ್ಲಿ ಕೋಟೆ-ಕಿಲ್ಲೆಗಳನ್ನು ಬಹಳ ಜಾಗರೂಕತೆಯಿಂದ ರಕ್ಷಿಸಲಾಗುತ್ತಿದೆ; ಆದರೆ ಮಹಾರಾಷ್ಟ್ರದಲ್ಲಿ ಛ.ಶಿವಾಜಿ ಮಹಾರಾಜರ ಅನೇಕ ಐತಿಹಾಸಿಕ ಕೋಟೆ-ಕಿಲ್ಲೆಗಳು ಅವನತಿಯ ಹಂತದಲ್ಲಿವೆಯೆಂದು ಹೇಳಿದರು.

ಈ ಸಂದರ್ಭದಲ್ಲಿ ಹಿಂದುತ್ವನಿಷ್ಠ ಸರ್ವಶ್ರೀ ಕಿಶೋರ ಘಾಟಗೆ, ಸಂಭಾಜಿರಾವ ಭೋಕರೆ ಮತ್ತು ಸುರೇಶ ಯಾದವ ಇವರು ವಿಶಾಲಗಡದ ಮೇಲಿನ ಅತಿಕ್ರಮಣವನ್ನು ಕಿತ್ತೆಸೆಯುವವರೆಗೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ನಿರ್ಧಾರವನ್ನು ವ್ಯಕ್ತಪಡಿಸಿದರು.