ಕೆಎಲ್ಇಯಿಂದ ಮತ್ತೊಂದು ದಿಟ್ಟ ಹೆಜ್ಜೆ
ಬೆಳಗಾವಿ : ಜಗತ್ತಿನಾದ್ಯಂತಮರಣ ಮೃದಂಗ ಭಾರಿಸುತ್ತಿರುವ ಹಾಗೂ ಜನರಲ್ಲಿ ಹೆದರಿಕೆ ಭಾವನೆಯನ್ನು ಹುಟ್ಟು ಹಾಕಿ ಮುನ್ನುಗ್ಗುತ್ತಿರುವ ಕೊರೊನಾ ವೈರಸ್ ಕೊವಿಡ್ -19 ಅನ್ನು ಎದುರಿಸಲು ಕೆಎಲ್ಇ ಸಂಸ್ಥೆಯು ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದ್ದು, ಅಂಬುಲನ್ಸ್ ಸೇವೆಯನ್ನು ನೀಡಲಾಗುತ್ತದೆ. ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರವು ಕೊರೊನಾದಿಂದ ಮೃತಪಟ್ಟವರ ಸುಗಮ ಅಂತ್ಯಕ್ರಿಯೆಗೆ ಅನುಕೂಲವಾಗುವ ದೃಷ್ಠಿಯಿಂದ ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರ ವಾಹನ ವ್ಯವಸ್ಥೆಯನ್ನು ಕಲ್ಪಿಸಿದೆ. ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಮಾತ್ರ ಈ ವ್ಯವಸ್ಥೆಯನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಅ್ಯಂಬುಲನ್ಸ(ವಾಹನ) ವಿಭಾಗದ ಮುಖ್ಯಸ್ತರಾದ ವಿ ಜಿ ಕಲ್ಮಠ, ಮೊ. 9844946777 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.