Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಾಜೀವ ಗಾಂಧೀ ಸ್ಮರಣಾರ್ಥ ಲೋಕಲ್ ವಿವ್ಯೂ ವಿಶೇಷ

localview news

ರಾಜೀವ್ ಗಾಂಧಿ ಅವರು ಆಗಸ್ಟ್ 20, 1944ರಲ್ಲಿ ಜನಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಅವರಿಗೆ ಕೇವಲ ಮೂರು ವರ್ಷದವರಾಗಿದ್ದರು. ಅವರ ತಂದೆ ಫಿರೋಜ್ ಗಾಂಧಿ ಸಂಸತ್ ಸದಸ್ಯರಾಗಿದ್ದರು ಹಾಗೂ ನಿರ್ಭಯ ಮತ್ತು ಪರಿಶ್ರಮದ ಸಂಸದೀಯ ಪಟು ಎಂಬ ಹೆಸರು ವಾಸಿಯಾಗಿದ್ದರು.

ರಾಜೀವ್ ಗಾಂಧಿ ಬಾಲ್ಯದಿಂದಲೂ ರಾಜಕಾರಣ ಹಾಗೂ ಆಗರ್ಭ ಸಿರಿವಂತಿಕೆಯಲ್ಲೇ ಬೆಳೆದವರು. ಅವರು ಪ್ರಭಾವಿಯಾಗಿಯೇ ಯೌವನಕ್ಕೆ ಕಾಲಿಟ್ಟವರು. ರಾಜೀವ್ ಗಾಂಧಿ ಅವರು 40ನೇ ವಯಸ್ಸಿಗೆ ಭಾರತದ ಯುವ ಪ್ರಧಾನಮಂತ್ರಿಯಾದರು. ಅಷ್ಟೇ ಏಕೆ ಅವರು ವಿಶ್ವದ ಅತ್ಯಂತ ಕಿರಿಯ ಮುಖ್ಯಸ್ಥರೆಂಬ ಹೆಗ್ಗಳಿಕೆ ಪಡೆದರು. ಅವರ ತಾಯಿ ಶ್ರೀಮತಿ ಇಂದಿರಾ ಗಾಂಧಿಯವರು 1966ರಲ್ಲಿ 48ನೇ ವಯಸ್ಸಿನಲ್ಲಿ ಪ್ರಧಾನಮಂತ್ರಿಯಾದರು. ಇವರ ತಾತ ಪಂಡಿತ್ ಜವಾಹರ್ಲಾಲ್ ನೆಹರು 58ನೇ ವಯಸ್ಸಿನಲ್ಲಿಯೇ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ 17 ವರ್ಷಗಳ ಸುದೀರ್ಘ ಕಾಲ ಆಳಿದರು.

logintomyvoice

ರಾಷ್ಟ್ರದಲ್ಲಿ ಹೊಸ ಪೀಳಿಗೆ ಪರಿವರ್ತನೆಯ ಮುನ್ಸೂಚಕರಾದ ಶ್ರೀ ರಾಜೀವ್ ಗಾಂಧಿ ಅವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶ ಪಡೆದರು. ಹತ್ಯೆಗೀಡಾದ ತಮ್ಮ ತಾಯಿಯ ಶೋಕಾಚರಣೆ ಪೂರ್ಣಗೊಂಡ ತಕ್ಷಣವೇ ಅವರು ಲೋಕಸಭಾ ಚುನಾವಣೆಗಳಿಗೆ ಆದೇಶ ನೀಡಿದರು. ಈ ಚುನಾವಣೆಯಲ್ಲಿ, ಕಾಂಗ್ರೆಸ್ ಈ ಹಿಂದಿನ ಏಳು ಚುನಾವಣೆಗಳಲ್ಲೇ ಅತ್ಯಂತ ಜನಪ್ರಿಯ ಮತದ ದೊಡ್ಡ ಭಾಗವನ್ನು ಗಳಿಸಿತು ಹಾಗೂ 508 ಲೋಕಸಭಾ ಕ್ಷೇತ್ರಗಳಲ್ಲಿ 401 ಕ್ಷೇತ್ರಗಳಲ್ಲಿ ದಾಖಲೆ ಗೆಲುವನ್ನು ಪಡೆಯಿತು.

ಯು ಎಸ್ ಪ್ರೆಸಿಡೆಂಟ್ ರೊನಾಲ್ಡ್ ರೇಗನ್ ಜೊತೆ ರಾಜೀವ್ ರವರ ಕಿರು ವಿಡಿಯೋ

ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಶ್ರೀ ರಾಜೀವ್ ಗಾಂಧಿ ಅವರು ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿಗೆ ಸೇರಿದರು. ಆದರೆ, ನಂತರ ಅವರು ಲಂಡನ್ನ ಇಂಪಿರಿಯಲ್ ಕಾಲೇಜಿಗೆ ಸ್ಥಳಾಂತರಗೊಂಡರು. ಅವರು ಮೆಕ್ಯಾನಿಕಲ್ ಎಂಜಿನಿಯರಿಂದ ಪದವಿ ಪೂರ್ಣಗೊಳಿಸಿದರು.

logintomyvoice

ರಾಜಕೀಯದಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರ ಸಹಪಾಠಿಗಳು ಹೇಳುವಂತೆ, ಅವರ ಪುಸ್ತಕ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂದ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವ ಶಾಸ್ತ್ರ, ರಾಜಕಿಯ ಅಥವಾ ಇತಿಹಾಸ ಪುಸ್ತಕಗಳು ಅಲ್ಲಿರಲಿಲ್ಲ. ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು. ಅವರು ಪಾಶ್ಚಿಮಾತ್ಯ ಮತ್ತು ಹಿಂದೂಸ್ತಾನಿ, ಶಾಸ್ತ್ರೀಯ ಹಾಗೆಯೇ ಆಧುನಿಕ ಸಂಗೀತವನ್ನು ತುಂಬಾ ಇಷ್ಟಪಡುತ್ತಿದ್ದರು. ಛಾಯಾಗ್ರಹಣ ಮತ್ತು ಹವ್ಯಾಸಿ ರೇಡಿಯೊದಲ್ಲಿ ಅವರಿಗೆ ವಿಶೇಷ ಆಸಕ್ತಿ ಇತ್ತು.

ಕೇಂಬ್ರಿಡ್ಜ್ನಲ್ಲಿ ವ್ಯಾಸಂಗ ಮಾಡುತ್ತಿರುವ ವೇಳೆ ಇಂಗ್ಲಿಷ್ ಅಧ್ಯಯನ ಮಾಡುತ್ತಿದ್ದ ಇಟಲಿಯ ಸೋನಿಯಾ ಮೈನೋ ಅವರನ್ನು ಶ್ರೀ ಗಾಂಧಿ ಭೇಟಿಯಾದರು. ನಂತರ ಸೋನಿಯಾ ಅವರನ್ನು ಶ್ರೀ ರಾಜೀವ್ ಗಾಂಧಿ ವರಿಸಿ ನವದೆಹಲಿಯಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ನಿವಾಸದಲ್ಲಿ ನೆಲೆಸಿದರು. ಅವರಿಗೆ ರಾಹುಲ್ ಮತ್ತು ಪ್ರಿಯಾಂಕ ಎಂಬ ಮಕ್ಕಳಿದ್ದಾರೆ.

logintomyvoice

1980ರಲ್ಲಿ ಅವರ ಸೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾದ ನಂತರ ಸನ್ನಿವೇಶ ಬದಲಾಯಿತು. ರಾಜಕೀಯ ರಂಗ ಪ್ರವೇಶಿಸಿ ತಾಯಿಯವರಿಗೆ ನೆರವು ನೀಡುವಂತೆ ಶ್ರೀ ಗಾಂಧಿ ಅವರಿಗೆ ಒತ್ತಡಗಳು ಬಂದವು. ನಂತರ ಅನೇಕ ಆಂತರಿಕ ಮತ್ತು ಬಾಹ್ಯ ಸವಾಲುಗಳು ಎದುರಾದವು. ಮೊದಲಿಗೆ ಈ ಒತ್ತಡಗಳಿಗೆ ಅವರು ಪ್ರತಿರೋಧ ವ್ಯಕ್ತಪಡಿಸಿದ್ದರು. ಆದರೆ ನಂತರ ಅವರ ಸಿದ್ದಾಂತಗಳಿಗೆ ತಲೆ ಬಾಗಿದರು. ತಮ್ಮ ಸೋದರನ ಸಾವಿನಿಂದ ತೆರವಾದ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದರು.

ಶ್ರೀ ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಈ ಎರಡು ಮಹತ್ವ ಹುದ್ದೆಗಳ ಅಧಿಕಾರ ಪಡೆದಿದ್ದು ದುರಂತದ ಸನ್ನಿವೇಶದಲ್ಲಿ. 31ನೇ ಅಕ್ಟೋಬರ್, 1984ರಲ್ಲಿ ತಮ್ಮ ತಾಯಿಯವರ ಬರ್ಬರ ಹತ್ಯೆ ನಂತರ ಅವರು ವೈಯಕ್ತಿಕ ದು:ಖ ಮತ್ತು ರಾಷ್ಟ್ರದ ಹೊಣೆಯನ್ನು ಸಮತೋಲನ, ಘನತೆ ಮತ್ತು ಸಂಯಮದಿಂದ ನಿಭಾಯಿಸಿದರು.

logintomyvoice

ಆಧುನಿಕ ಮನಸ್ಸಿನ ಆದರೆ ಪ್ರಾಯೋಗಿಕ ವ್ಯಕ್ತಿಯಾದ ಶ್ರೀ ರಾಜೀವ್ ಗಾಂಧಿಯವರು ಅತ್ಯುನ್ನತ ತಂತ್ರಜ್ಞಾನದ ವಿಶ್ವದಲ್ಲಿನ ಮನೆಯಲ್ಲಿದರು. ಹಾಗೂ ಭಾರತವನ್ನು ಏಕತೆಯ ದೇಶವನ್ನಾಗಿ ಮಾಡಿ 21ನೇ ಶತಮಾನದಲ್ಲಿ ಪ್ರಗತಿ ಪಥದತ್ತ ಕೊಂಡ್ಯೊಯುವ ಗುರಿ ಹೊಂದಿದ್ದರು

ಮಾಲ್ಡೀವ್ಸ್ ದಂಗೆ , ಶ್ರೀಲಂಕಾದಲ್ಲಿ ಎಲ್ ಟಿ ಟಿ ಇ ಉಗ್ರರ ಅಟ್ಟಹಾಸಕ್ಕೆ ಕೊನೆ ಹಾಡಲು ಅಲ್ಲಿಗೆ ಸೈನಿಕರನ್ನು ಕಳಿಸಿಕೊಟ್ಟರು. ಆದರೆ ಎಲ್ ಟಿ ಟಿ ಇ ವಿರುದ್ಧದ ಸೇನಾ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಿದರು ಇದೆ 1991 ರಲ್ಲಿ ರಾಜೀವ್ ಅವರ ಸಾವಿಗೆ ಕಾರಣವಾಯಿತು. ಇದರಿಂದಾಗಿ ರಾಜೀವ್ ಗಾಂಧಿ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾಯಿತು.

logintomyvoice

1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇದನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಹೇಳಿದ್ದಾರೆ ನಾನು ನ್ಯೂಯಾರ್ಕ್ ಗೆ ಹೋಗಿ ಚಿಕಿತ್ಸೆ ಪಡೆದು ಇಂದು ಜೀವಂತವಾಗಿರುವುದಕ್ಕೆ ರಾಹುಲ್ ಗಾಂಧಿ ಕಾರಣ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು.