ಉಳಿದ ಐಪಿಎಲ್ ಪಂದ್ಯಗಳ ಬಗ್ಗೆ ಬಿಸಿಸಿಐ ಚಿಂತನೆ...!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಸಹ ಬಿಸಿಸಿಐನ ಹಂಗಾಮಿ ಸಿಇಒ ಹೇಮಾಂಗ್ ಅಮೀನ್, ಐಪಿಎಲ್ 2021 ರ ಉಳಿದ ಪಂದ್ಯಗಳಿಗೆ ಎರಡು ವಿಭಿನ್ನ ವೇಳಾಪಟ್ಟಿಗಳನ್ನು ಯೋಜಿಸಿದ್ದಾರೆ.
ಟಿ 20 ವಿಶ್ವಕಪ್ ನಡೆಯುವ ಮೊದಲು ಈ ವರ್ಷದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ ಐಪಿಎಲ್ 2021 ಪೂರ್ಣಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
ಅಮೀನ್ ಯುನೈಟೆಡ್ ಕಿಂಗ್ಡಮ್ (ಯುಕೆ) ಯನ್ನು ಗಮನದಲ್ಲಿಟ್ಟುಕೊಂಡು ಒಂದು ವೇಳಾಪಟ್ಟಿಯನ್ನು ರಚಿಸಿದ್ದಾರೆ, ಮತ್ತು ಇನ್ನೊಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಐಪಿಎಲ್ ಎಲ್ಲಿಗೆ ಸ್ಥಳಾಂತರಗೊಳ್ಳಬೇಕು ಎಂಬುದನ್ನು ಬಿಸಿಸಿಐ ನಿರ್ಧರಿಸಬೇಕು.